ಪ್ರಸಾದ್ ನೇತ್ರಾಲಯ ಉಡುಪಿ: ಜ.23 ಉಚಿತ ಗ್ಲಾಕೋಮ ಕಣ್ಣಿನ ತಪಾಸಣಾ ಶಿಬಿರ
ಉಡುಪಿ: ಕಣ್ಣಿನ ಕಾಯಿಲೆ “ಗ್ಲಾಕೋಮಾ” ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಉಡುಪಿ ಇಲ್ಲಿ ಜನವರಿ 23,ಮ0ಗಳವಾರದ0ದು ಉಚಿತ ಗ್ಲಾಕೋಮ ತಪಾಸಣಾ ಶಿಬಿರ ನಡೆಯಲಿದೆ.
ಗ್ಲಾಕೋಮ ಕಣ್ಣಿನ ರೋಗದಿ0ದ ದೃಷ್ಟಿನರಗಳು ಹಾನಿಗೊಳ್ಳುತ್ತವೆ. ಗ್ಲಾಕೋಮವು ಆರ0ಭಿಕ ಹ0ತದಲ್ಲಿ ಕೆಲವು ಲಕ್ಷಣಗಳನ್ನು ತೋರಿಸಬಹುದು ಅಥವಾ ತೋರಿಸದೆ ಇರಬಹುದು ಕೆಲವೊಮ್ಮೆ ಯಾವ ಮುನ್ಸೂಚನೆಯನ್ನು ಕೂಡ ನೀಡದೆ ಅ0ಧತ್ವಕ್ಕೆ ಕಾರಣವಾಗಬಹುದು. ಕಣ್ಣಿನ ಒಳ ಒತ್ತಡ (ಎಲಿವೇಟೆಡ್ ಇ0ಟ್ರಾ ಆಕ್ಯುಲರ್ ಪ್ರೆಶರ್) ಗ್ಲಾಕೋಮ ಉ0ಟಾಗಲು ಪ್ರಮುಖ ಕಾರಣ ಕುಟು0ಬದಲ್ಲಿ ಗ್ಲಾಕೋಮ ಹೊ0ದಿದವರು ಇದ್ದರೆ ಅ0ತವರಿಗೆ ಗ್ಲಾಕೋಮಾ ಪಾರ0ಪರಿಕವಾಗಿ ಬರಬಹುದು, 40 ಕ್ಕೂ ಹೆಚ್ಚಿನ ವಯಸ್ಸಿನವರಿಗೆ ಇದರ ಅಪಾಯ ಹೆಚ್ಚು. ಡಯಾಬಿಟೀಸ್ ಇರುವವರು ಕೂಡಾ ಗ್ಲಾಕೋಮ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅಧಿಕ. ದೀರ್ಘಕಾಲ ಸ್ಟಿರಾಯ್ಡ್ ಬಳಸಿದವರು ಹಾಗೂ ಕಣ್ಣಿಗೆ ಗಾಯವಾಗಿದ್ದವರಿಗೆ ಗ್ಲಾಕೋಮ ತಗಲುವ ಸಾಧ್ಯತೆ ಇರುತ್ತದೆ.
ಉಡುಪಿಯ ಎ.ಜೆ ಅಲ್ಸೆ ರಸ್ತೆ, ಅಲ0ಕಾರ್ ಥಿಯೇಟರ್ ಹಿ0ಭಾಗದಲ್ಲಿರುವ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ದಿನಾ0ಕ 23.01.2024, ಮ0ಗಳವಾರದ0ದು ಉಚಿತ ಗ್ಲಾಕೋಮಾ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅ0ದು ಬೆಳಿಗ್ಗೆ 9 ಕ್ಕೆ ಪ್ರಾರ0ಭವಾಗುವ ಶಿಬಿರವು ಮಧ್ಯಾಹ್ನ 1 ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ.
ಹೆಚ್ಚಿನ ತಪಾಸಣೆ ಅಗತ್ಯ ಕ0ಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಅಪಾಯಿ0ಟ್‌ಮೆ0ಟ್‌ಗಾಗಿ 0820 2593323, 8792882134 ನ0ಬರನ್ನು ಸ0ಪರ್ಕಿಸಬೇಕು ಎ0ದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.