ಬಡಗುಬೆಟ್ಟು ಕ್ರೆ.ಕೋ ಆ.ಸೊಸೈಟಿಗೆ ಪುತ್ತಿಗೆಶ್ರೀ ಭೇಟಿ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಬುಧವಾರ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಭೇಟಿನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಬಡಗುಬೆಟ್ಟು ಸೊಸೈಟಿಯ ಮುಖ್ಯಸ್ಥರಾದ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪಾದಪೂಜೆ ಸಲ್ಲಿಸಿ ಸಂಸ್ಥೆ ವತಿಯಿಂದ ಶ್ರೀಪಾದರನ್ನು ಗೌರವಿಸಿ ಕಾಣಿಕೆಯನ್ನು ಸಮರ್ಪಿಸಿದರು.
ಪುತ್ತಿಗೆ ಶ್ರೀಗಳು ಅನುಗ್ರಹ ಸಂದೇಶದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಇನ್ನಷ್ಟು ವಿಶೇಷ ಸಾಧನೆ ಮಾಡುವಂತೆ ಉಡುಪಿ ಶ್ರೀಕೃಷ್ಣದೇವರು ಎಲ್ಲರನ್ನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು. ಉಪಾಧ್ಯಕ್ಷರಾದ ಎಲ್ ಉಮಾನಾಥ, ಜನರಲ್ ಮೆನೇಜರ್ ರಾಜೇಶ್ ಶೇರಿಗಾರ್, AGM ಪ್ರವೀಣ್ ಕುಮಾರ್, ನಿರ್ದೇಶಕ ಮಂಡಳಿಯ ಸದಸ್ಯರಾದ ಜಯಾನಂದ ಮೆಂಡನ್, ಸದಾಶಿವ ನಾಯಕ್, ಜಯ ಶೆಟ್ಟಿ, ಗಾಯತ್ರಿ ಭಟ್, ಶ್ವೇತ ಜಯಕರ್ ಶೆಟ್ಟಿ,ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥರಿದ್ದರು.