“ಉಡುಪಿ ಟೈಮ್ಸ್” ಪುತ್ತಿಗೆ ಪರ್ಯಾಯೋತ್ಸವ ವಿಶೇಷ ಸಂಚಿಕೆ ಬಿಡುಗಡೆ

ಉಡುಪಿ: ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಜನರ ಮನಗೆದ್ದ ಕನ್ನಡ ಸುದ್ದಿ ಜಾಲತಾಣ “ಉಡುಪಿ ಟೈಮ್ಸ್” ಪುತ್ತಿಗೆ ಪರ್ಯಾಯೋತ್ಸವದ ಸಂದರ್ಭದಲ್ಲಿ ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯರವರ ನೇತೃತ್ವದ ಕೃಷ್ಣ ಡಾನ್ಸ್ ಗ್ರೂಪ್ ಇವರ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ವಿಶೇಷ ಸಂಚಿಕೆಯನ್ನ ಬಿಡುಗಡೆಗೊಳಿಸಲಾಯಿತು.

ಕಳೆದ 5 ವರ್ಷಗಳಿಂದ ಸುದ್ದಿಪ್ರಚಾರ ಮಾತ್ರವಲ್ಲದೆ ಜನಪರ ಸೇವೆಯಲ್ಲಿಯೂ ಹೆಸರುವಾಸಿಯಾಗಿರುವ ಉಡುಪಿ ಟೈಮ್ಸ್ ಇತ್ತೀಚಿಗಷ್ಟೇ ಒಂದು ಕೋಟಿ ಓದುಗರನ್ನ ಪಡೆದಿರುವ ಕೀರ್ತಿಯನ್ನು ಹೊಂದಿದೆ. ಉತ್ತಮ ಸಾಮಾಜಿಕ ಕಳಕಳಿಯ ಸುದ್ದಿಗಳು, ರಾಜಕೀಯ, ಸಿನೆಮಾ, ಕ್ರೈಮ್ ಮಾತ್ರವಲ್ಲದೆ ಇತರೆ ಸುದ್ದಿಗಳ ಮೂಲಕ ಓದುಗರ ಮನಗೆದ್ದಿರುವ ಈ ವೆಬ್ ಸೈಟ್ ಈಗಾಗಲೇ ತನ್ನ ಫೇಸ್ ಬುಕ್, ಯೂಟ್ಯೂಬ್ ಖಾತೆಯಲ್ಲಿ ಸಾವಿರಾರು ಜನ ಫಾಲೋವರ್ಸ್ ಅನ್ನ ಹೊಂದಿದ್ದು ಮಾತ್ರವಲ್ಲದೆ ಕ್ಷೀಪ್ರ ಹಾಗೂ ನಿಖರ ಸುದ್ದಿಗಾಗಿ ಮನೆ ಮಾತಾಗಿದೆ. 

ಇದೀಗ ಸಂಸ್ಥೆಯ ಹೊಸ ಪ್ರಯತ್ನವೆಂಬಂತೆ ಪರ್ಯಾಯದ ಸಂದರ್ಭದಲ್ಲಿ ಹೊಸ ಸಂಚಿಕೆಯನ್ನ ಹೊರತರಲಾಗಿದೆ. ಸುಮಾರು 24 ಪುಟಗಳ ಈ ಸಂಚಿಕೆಯು ಅನೇಕ ಲೇಖನಗಳನ್ನು, ಪರ್ಯಾಯಕ್ಕೆ ಗಣ್ಯರ ಶುಭಾಶಯ ಹಾಗೂ ಕೃಷ್ಣ ಮಠದ ಹಾಗೂ ಧಾರ್ಮಿಕ ವಿಧಿ ವಿಧಾನದ ವಿಶೇಷ ಫೋಟೋಗಳನ್ನ ಒಳಗೊಂಡಿದೆ. 

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಸಿದ್ಧ ನೇತ್ರ ತಜ್ಞರಾದ ಕೆ.ಡಾ.ಕೃಷ್ಣಪ್ರಸಾದ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಅನಿವಾಸಿ ಉದ್ಯಮಿಗಳು, ಸಮಾಜ ಸೇವಕರು ಹಾಗೂ, NRI ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಉಡುಪಿ ಶೇಖ್ ವಾಹಿದ್, ಕೃಷ್ಣಮೂರ್ತಿ ಆಚಾರ್ಯ, ಅಮೃತ ಕೃಷ್ಣಮೂರ್ತಿ ಆಚಾರ್ಯ, ಕಿರುತೆರೆ ನಟ ಕಾರ್ತಿಕ್ ಸಮಗ,ಎಂ ಎ ಗಫೂರು, ನ್ಯಾಯವಾದಿ ಎ.ಸಂಜೀವ, ನಟ ರೂಪೇಶ್ ಶೆಟ್ಟಿ, ಸತೀಶ್ ಸಾಲಿಯಾನ್, ದರ್ಶಿತ್ ಶೆಟ್ಟಿ, ಚರಣ್ ರಾಜ್, ಆಕರ್ಷಣ್ ಬ್ಯಾಗ್ಸ್ ಮಾಲಕ ಸಾಧಿಕ್, ಉಡುಪಿ ಟೈಮ್ಸ್ ಪ್ರವರ್ತಕರಾದ ಉಮೇಶ್ ಮಾರ್ಪಳ್ಳಿ, ಸ್ಟೀವನ್ ಕುಲಾಸೋ, ಉಪ ಸಂಪಾದಕಿ ಅಕ್ಷತಾ ಗಿರೀಶ್, ಶುಭಲಕ್ಷ್ಮಿ ಉಮೇಶ್, ಗಿರೀಶ್ ಐತಾಳ್, ಸ್ಟೀವನ್ ಡಿಸೋಜ, ಅಭಿಷೇಕ್, ಪ್ರೇಮ್ ಮೆನೆಜಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!