ಉಡುಪಿ: ಪ್ರತ್ಯೇಕ ಪ್ರಕರಣ- ನಾಲ್ವರ ಆತ್ಮಹತ್ಯೆ
ಬ್ರಹ್ಮಾವರ, ಜ.16: ವೈಯಕ್ತಿಕ ಕಾರಣದಿಂದ ಮನನೊಂದ ಬಾರ್ಕೂರು ನಾಗರಮಠ ರಸ್ತೆ ನಿವಾಸಿ ಲಲಿತಾ ಎಂಬವರ ಮಗ ಶ್ಯಾಮ(38) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.16ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕರ್ಜೆ ಹೆಗ್ಗುಂಜೆಡ್ಡು ನಿವಾಸಿ ಲತಾ ಬಾಯಿ ಎಂಬವರ ಸುನೀಲ್(29) ಎಂಬಾತ ಜೀವನದಲ್ಲಿ ಜೀಗುಪ್ಸೆಗೊಂಡು ಜ.16ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಮದ್ಯಪಾನ ಮಾಡಿದ ಅಮಲಿನಲ್ಲಿ ಜ.7ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮುನಿಯಾಲು ಗ್ರಾಮದ ಸತೀಶ(56) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಜ.15ರಂದು ಬೆಳಗ್ಗೆ ಅಜ್ಜರಕಾಡು ಉಡುಪಿ ಸರಕಾರಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಕಾರ್ಕಳದ ಸ್ವಾತಿ ಎಂಬವರ ಸಾಣೂರಿನ ಮನೆಯ ಬೆಡ್ ರೂಮಿನಲ್ಲಿ 25ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಜ.15ರಂದು ಬೆಳಕಿಗೆ ಬಂದಿದೆ. ಮೃತದೇಹವು ಸಂಪೂರ್ಣ ಕೊಳೆತು ಹೋಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.