ಮಲ್ಪೆ: ತಲವಾರು ಹಿಡಿದು ಗಲಾಟೆ- ಮೂವರು ಪೊಲೀಸ್ ವಶಕ್ಕೆ

ಮಲ್ಪೆ: ಅಡ್ಡ ಬೇಂಗ್ರೆಯಲ್ಲಿ ಜ.12ರಂದು ತಡರಾತ್ರಿ ವೇಳೆ ತಲವಾರು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಹಮ್ಮದ್ ಸಕ್ಲೇನ್, ಅಬ್ದುಲ್ ರಾಕೀಬ್, ಸವಿನ್ ಸುಮಿತ್ ತೇಜಪಾಲ್ ಎಂಬವರು ತಲವಾರು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ಹಾಗೂ ಸ್ಕೂಟರ್, ತಲವಾರನ್ನು ವಶಕ್ಕೆ ಪಡೆದುಕೊಂಡರು.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!