“ಜಾಗರ: ಇದು ಪ್ರತಿಸ್ಪಂದನೆಯ ಮೊಳಕೆ ಮತ್ತು ಇತರ ಲೇಖನಗಳು” ಕೃತಿ ಬಿಡುಗಡೆ
ಉಡುಪಿ: ಲೇಖಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಶ್ರೀರಾಮ ದಿವಾಣ ಮೂಡುಬೆಳ್ಳೆ ಇವರು ಬರೆದ ಲೇಖನಗಳ ಸಂಕಲನ “ಜಾಗರ: ಇದು ಪ್ರತಿಸ್ಪಂದನೆಯ ಮೊಳಕೆ ಮತ್ತು ಇತರ ಲೇಖನಗಳು” ಕೃತಿ ಬಿಡುಗಡೆ ಸಮಾರಂಭ ಜನವರಿ ಏಳರಂದು ಮಣಿಪಾಲ ಮಂಚಿಕೆರೆಯ ‘ನವಮಿ’ಯಲ್ಲಿ ನಡೆಯಿತು.
ಪ್ರತಿಷ್ಟಿತ ಮುದ್ದಣ ಮತ್ತು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ಬಹುಭಾಷಾ ಕವಿ, ಪಣಿಯಾಡಿ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ, ನಾಟಕ ರಚನಾಕಾರ, ಅನುವಾದಕ ಅಂಶುಮಾಲಿ ಅವರು ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಪ್ರಸಿದ್ಧ ದೈವ ನರ್ತನ ಕಲಾವಿದ ಸುಧಾಕರ ಪಾಣಾರ ಮೂಡುಬೆಳ್ಳೆ ಹಾಗೂ ಪರಿಸರವಾದಿ ಪ್ರೇಮಾನಂದ ಕಲ್ಮಾಡಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.