ತಾಯಿ, ಮಗಳಿಗೆ ರಾಜ್ಯ ಮಟ್ಟದ ಫಿಲಾಟಲಿಯಲ್ಲಿ ಕಂಚಿನ ಪದಕ

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ 2024 ರಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹಣೆ ” ಸ್ಪೆಷಲ್ ನ್ಯಾಷನಲ್ ಅಂಡ್ ಇಂಟರ್ ನ್ಯಾಷನಲ್ ಡೇಸ್” ಹಾಗು ಪ್ರಜ್ಞಾ ಜನಾರ್ದನ್ ಕೊಡವೂರು ಇವರ ಸಂಗ್ರಹದ “ಆರ್ಮಿ ಪೋಸ್ಟಲ್ ಕವರ್”ಗೆ ಕಂಚಿನ‌ ಪದಕದ ಪುರಸ್ಕಾರ ದೊರೆತಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್, ಬೆಂಗಳೂರು ದಕ್ಷಿಣ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ದಾಸ್,ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್ ಹಾಗು ಜನರಲ್ ಮ್ಯಾನೇಜರ್ ಡಿಎಪಿ ಜೂಲಿಯಾ ಮೋಹಪತ್ರ ಉಪಸ್ಥಿತಿತರಿದ್ದರು.

Leave a Reply

Your email address will not be published. Required fields are marked *

error: Content is protected !!