ಪೆರ್ಡೂರು: ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕು. ದಾಮಿನಿ
ಪೆರ್ಡೂರು: ಸಂಸ್ಕೃತ ಪಂಡಿತರಾದ ದಿ. ರಾಮಕೃಷ್ಣ ಐತಾಳರ ಮೊಮ್ಮಗಳು, ಬಂಗಾರ್ ಭಟ್ರು ಎಂದೇ ಖ್ಯಾತಿಯಲ್ಲಿರುವ ಪುರುಷೋತ್ತಮ ಐತಾಳ ಹಾಗೂ ಸ್ವರ್ಣ ರೇಖಾರವರ ಮಗಳಾದ ಕುಮಾರಿ ದಾಮಿನಿ
ಅವರು CA ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೆರ್ಡೂರಿನ ಎಫ್.ಎಸ್.ಕೆ. ಆಂಗ್ಲ ಮಾಧ್ಯಮ ಶಾಲೆ, ಹೆಬ್ರಿಯ ಎಸ್.ಆರ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಯುಸಿ, ಬಿಕಾಂ ಆಳ್ವಾಸ್ ಕಾಲೇಜು ಮೂಡುಬಿದಿರೆ, ಎಂಬಿಎ ಯನ್ನು ಯೂನಿವರ್ಸಿಟಿ ಕಾಲೇಜು ಮಂಗಳೂರು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಸಿಎ ಇಂಟರ್ಸಿಪ್ ಅನ್ನು ಸಿ.ಎ. ರಾಘವೇಂದ್ರ ರಾವ್ ಆ್ಯಂಡ್ ಅಸೋಸಿಯೇಟ್ ಮಂಗಳೂರು ಇಲ್ಲಿ ಮುಗಿಸಿದ್ದಾರೆ.