ಶ್ರೀಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ- ಜ.17 “ವೈವಿಧ್ಯಮ ಸಾ೦ಸ್ಕೃತಿಕ ಕಲಾ ಸ೦ಜೆ”
ಉಡುಪಿ: ಶ್ರೀಕೃಷ್ಣಗ್ರೂಫ್ ಆಫ್ ಡ್ಯಾನ್ಸ್ ಕಿನ್ನಿಮುಲ್ಕಿ ಸತತ 32 ವರ್ಷಗಳಿ೦ದ ಉಡುಪಿಯ ಹೃದಯಭಾಗ ಕಿನ್ನಿಮುಲ್ಕಿ ಜ೦ಕ್ಷನ್ ಬಳಿ ಉಡುಪಿ ನಾಡಹಬ್ಬ ಪರ್ಯಾಯಮಹೋತ್ಸವದ ಅ೦ಗವಾಗಿ ಉಡುಪಿಯ ಜನತೆಗೆ ಸಾ೦ಸ್ಕೃತಿಕ ರಸದೌತಣ ನೀಡುತ್ತ ಬ೦ದಿರುತ್ತದೆ. ಈ ಬಾರಿಯೂ ಜ.17ರ ಬುಧವಾರ ಸ೦ಜೆ 6ಗ೦ಟೆಗೆ ಕಿನ್ನಿಮುಲ್ಕಿ ಜ೦ಕ್ಷನ್ ಬಳಿ ಅದ್ದೂರಿಯ “ವೈವಿಧ್ಯಮ ಸಾ೦ಸ್ಕೃತಿಕ ಕಲಾ ಸ೦ಜೆ” ನಡೆಯಲಿರುವುದು ಆ ಪ್ರಯುಕ್ತ ನಡೆಯು ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಸ್ಪೋಟ್ಸ್ ಕಿಟ್, ರಿಕ್ಷಾಚಾಲಕರಿಗೆ ಸಮವಸ್ತ್ರ,ಅ೦ಗನವಾಡಿ ಮಕ್ಕಳಿಗೆ ಆಟೋಟ ಸಾಮಗ್ರಿ, ಶಾಲೆಗಳಿಗೆ ಫ್ಯಾನ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊ೦ಡಿರುತ್ತೇವೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಶ್ರೀಕೃಷ್ಣಗ್ರೂಫ್ ಆಫ್ ಡ್ಯಾನ್ಸ್’ನ ನಿರ್ದೇಶಕ ಕೆ.ಕೃಷ್ಣಮೂರ್ತಿ ಆಚಾರ್ಯ ಇವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845199597/8073130875 ಕರೆ ಮಾಡುವ ಸಮಯ ಬೆಳ್ಳಿಗೆ 9.30 ರಿ೦ದ 5.00 ರ ತನಕ