ರಂಗಭೂಮಿಯಲ್ಲಿ ಶ್ರೀಲಲಿತೆ ನಾಟಕ ತಂಡದಿಂದ ಹೊಸತನದ ಪ್ರಯೋಗ: ಪಟ್ಲ ಸತೀಶ ಶೆಟ್ಟಿ

“ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

ಮಂಗಳೂರು: ರಂಗಭೂಮಿಯಲ್ಲಿ ಶ್ರೀ ಲಲಿತೆ ಕಲಾವಿದರ ತಂಡ ವಿಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಹೊಸತನವನ್ನು ನೀಡಿದೆ. ಅದರಲ್ಲೂ ಶ್ರೀಲಲಿತೆ ಕಲಾವಿದರು ತಂಡದಿಂದ ಪ್ರದರ್ಶನಗೊಂಡ ಗರುಡ ಪಂಚಮಿ ನಾಟಕದಲ್ಲಿ ವಿಶಿಷ್ಠವಾದ ರಂಗವಿನ್ಯಾಸವನ್ನು ಬಳಸಲಾಗಿದೆ. ಕಿಶೋರ್ ಡಿ ಶೆಟ್ಟಿ ಅವರು ರಂಗಭೂಮಿಗೆ ಬಹಳಷ್ಟು ಉತ್ತಮ ಮೌಲ್ಯಯುತ ನಾಟಕಗಳನ್ನು ನೀಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಇದೆ ಎಂದು ಯಕ್ಚಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಮಂಗಳೂರು ಪುರಭವನದಲ್ಲಿ ಶ್ರೀ ಕಲಾವಿದರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಗರುಡ ಪಂಚೆಮಿ ನಾಟಕದ 50 ನೇ ಪ್ರದರ್ಶನದ ಸಂಭ್ರಮಾಚರಣೆ ಮತ್ತು ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಅವರಿಗೆ ನೀಡಲಾದ ರಂಗಕಲಾ ಬಂಧು ಬಿರುದು ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮೇಯರ್ ಸುಧೀರ್ ಶೆಟ್ಟ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಕಿಶೋರ್ ಡಿ ಶೆಟ್ಟಿ ಅವರು ಅನೇಕ ವರ್ಷಗಳಿಂದ ನಾಟಕ ತಂಡಗಳನ್ನು ಕಟ್ಟಿ ಕಲಾವಿದರಿಗೆ ಆಸರೆಯಾದವರು. ಪರಿಣಾಮಕಾರಿ ಸಾಮಾಜಿಕ, ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳ ಪ್ರದರ್ಶನದ ಮೂಲಕ ಅವರು ಹೆಸರು ಗಳಿಸಿದವರು. ರಂಗಭೂಮಿಗೆ ಅವರದ್ದು ದೊಡ್ಡ ಕೊಡುಗೆಯೇ ಇದೆ ಎಂದವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೋಶಾಧಿಕಾರಿ ಸಿಎ ಸುದೇಶ್ ರೈ, ಜನನಿ ಕನ್ ಸ್ಟ್ರಕ್ಷನ್ ಮಾಲಕ ಸುಧಾಕರ್ ಪೂಂಜ, ಹೋಟೆಲ್ ಉದ್ಯಮಿ ಶಶಿಕಾಂತ ಶೇಖ, ಲ. ಚಂದ್ರಹಾಸ್ ಶೆಟ್ಟಿ, ಉದ್ಯಮಿ ತಾರಾನಾಥ ಶೆಟ್ಟಿ ಬೋಳಾರ, ಭುಜಬಲಿ ಧರ್ಮಸ್ಥಳ, ಲೀಲಾಕ್ಷ ಕರ್ಕೇರ, ಲ. ಸ್ವರೂಪ ಎನ್. ಶೆಟ್ಟಿ, ನವೀನ್ ಶೆಟ್ಟಿ ಅಳಕೆ ಭಾಗವಹಿಸಿದ್ದರು.

“ಇದೇ ಸಂದರ್ಭದಲ್ಲಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಅವರಿಗೆ ರಂಗಕಲಾಬಂಧು ಬಿರುದು ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ತ್ರಿರಂಗ ಸಂಗಮ ಮುಂಬೈ ಇದರ ಸಂಚಾಲಕರಾದ ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ, ಕರ್ನೂರು ಮೋಹನ್ ರೈ ಅವರನ್ನು ಸನ್ಮಾನಿಸಲಾಯಿತು” ನಾಟಕ ರಚನೆಕಾರ ಜೀವನ್ ಉಳ್ಳಾಲ್, ಮೋಹನ್ ಕೊಪ್ಪಲ, ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಗೋಕುಲ್ ದಾಸ್ , ಉಪಸ್ಥಿತರಿದ್ದರು. ಕಿಶೋರ್ ಡಿ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು. ಬಳಿಕ ಗರುಡ ಪಂಚೆಮಿ ನಾಟಕದ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

error: Content is protected !!