ಪರ್ಯಾಯ ಶ್ರೀಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಎಲ್ಲೂರು ಶ್ರೀವಿಶ್ವನಾಥ ಕ್ಷೇತ್ರಕ್ಕೆ ಭೇಟಿ
ಕಾಪು: ಪರ್ಯಾಯ ಶ್ರೀಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಎಲ್ಲೂರು ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.
ಮಠದ ಅಧಿಕಾರಿಗಳು ಸ್ವಾಗತಿಸಿ ಗೌರವಿಸಿದರು.
ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ ತಮ್ಮ ತಂದೆಯವರು ಈ ದೇವರಿಗೆ ಪೂಜೆ ಮಾಡಿದನ್ನು ಸ್ಮರಿಸಿಕೊಂಡರು ಹಾಗೂ ತಮ್ಮ ನಾಲ್ಕನೇ ಪರ್ಯಾಯಕ್ಕೆ ಎಲ್ಲರನ್ನು ಆಹ್ವಾನಿಸಿದರು.