ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟ್ ಯಾರು ಎಂದು ಬಿಜೆಪಿ ಸಾಬೀತುಪಡಿಸಲಿ:  ಕಾಂಗ್ರೆಸ್ ಸವಾಲು

ಉಡುಪಿ: 35 ನಗರಸಭಾ ವಾರ್ಡುಗಳನ್ನು ಹೊಂದಿದ ಉಡುಪಿ ನಗರಸಭೆಯಲ್ಲಿ ಬಿಜೆಪಿ 32 ಮಂದಿ ಸದಸ್ಯರನ್ನು ಹೊಂದಿದೆˌ ಶಾಸಕರು ಪ್ರತಿ ತಿಂಗಳು ತಮ್ಮ ಪಕ್ಷದ ಸದಸ್ಯರುಗಳನ್ನು ಸೇರಿಸಿಕೊಂಡು ನಗರ ಸಭೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರಲ್ಲವೇˌ ನಿರಂತರವಾಗಿ ಅಧಿಕಾರದಲ್ಲಿದ್ದ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಉಡುಪಿಯಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿಲ್ಲ ಎಂದು  ಸಮರ್ಥಿಸಿಕೊಳ್ಳಲು ಸಾಧ್ಯವೇ?. ಈ ಹಿಂದೆ ನಗರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ ಶಾಸಕರಿಗೂ ಈ ವಿಷಯ ತಿಳಿದಿಲ್ಲವೇ?.

ಬಿಜೆಪಿಯ ಆಡಳಿತ ಅವಧಿಯಲ್ಲಿ ಕುಡಿಯುವ ನೀರಿನ ದರ ಏರಿಕೆˌ ಕಟ್ಟಡ ತೆರಿಗೆ ಏರಿಕೆ, ಕಳಪೆ ಕಾಮಗಾರಿ, ಭ್ರಷ್ಟಾಚಾರ ಬ್ರೋಕರ್‌ಗಳ ಹಾವಳಿ ಇರಲಿಲ್ಲವೇ?.  ಆಡಳಿತ ವ್ಯವಸ್ಥೆಯಲ್ಲಿ 32 ಮಂದಿ ಸದಸ್ಯರನ್ನು ಹೊಂದಿಯೂ ನಗರಸಭೆಯಲ್ಲಿ ಭ್ರಷ್ಟಾಚಾರ, ಬ್ರೋಕರ್ ಗಳ ಹಾವಳಿ ಎಂದು ನಗರಸಭೆ ವಿರುದ್ಧವೇ ಮುತ್ತಿಗೆ ಹಾಕುವ ಬದಲು ಶಾಸಕರೇ ಈ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ.

ನಗರಸಭೆಯಲ್ಲಿ ಅಕ್ರಮ ಕಟ್ಠಡಗಳು ನಿರಂತರವಾಗಿ ತಲೆಯೆತ್ತಿ ನಿಲ್ಲುತ್ತಿವೆ ಇದಕ್ಕೆ ಕಾರಣರು ಯಾರುˌ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ  ಪರವಾನಿಗೆ ಅಗತ್ಯ ಈ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಂಡುಬರದೆ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದು ಸಾಮಾನ್ಯವಾಗಿದೆ. ಶಾಸಕರು ಯಾಕೆ ಇದರ ಬಗ್ಗೆ ಗಮನಹರಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಏಜೆಂಟರು ನಗರಸಭೆಯ ಭ್ರಷ್ಟಾಚಾರ ನಡೆಯಲು ಕಾಣಿಭೂತರಾಗಿದ್ದಾರೆ ಎನ್ನುವ ಬಿಜೆಪಿ ಮುಖಂಡರಾದ ಮಟ್ಟಾರುರವರ ಹೇಳಿಕೆ ಜನರನ್ನು ತಪ್ಪು ದಾರಿಗೆ ಎಳೆಯುವ ಷಡ್ಯಂತರವಾಗಿದೆ.

ಜಿಲ್ಲಾ ಉಸ್ತುವಾರಿಗಳು ಶ್ರೀಗಳ ಪುರ ಪ್ರವೇಶದಲ್ಲಿ ಭಾಗವಹಿಸದೆ ಇರುವುದಕ್ಕೆ ಕಾರಣವನ್ನು ತಿಳಿದುಕೊಂಡು ಆಪಾದನೆಯನ್ನು ಮಾಡುವುದು ಆರೋಗ್ಯಕರ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ನರಸಿಂಹಮೂರ್ತಿ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ತಮ್ಮ ಪ್ರಕಟಣೆಯಲ್ಲಿ ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!