ಭಾರತದ ಇತಿಹಾಸದಲ್ಲಿ ಮೋದಿಯವರು ಅತ್ಯಂತ ಯಶಸ್ವಿ ಪ್ರಧಾನಿ, ರಿಲಯನ್ಸ್ ಯಾವತ್ತಿಗೂ ಗುಜರಾತಿ ಸಂಸ್ಥೆ- ಮುಕೇಶ್ ಅಂಬಾನಿ

ನವದೆಹಲಿ: ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಾನು ಗೇಟ್‌ವೇ ಆಫ್ ಇಂಡಿಯಾ ನಗರದಿಂದ ಆಧುನಿಕ ಭಾರತದ ಬೆಳವಣಿಗೆಯ ಹೆಬ್ಬಾಗಿಲಿಗೆ ಬಂದಿದ್ದೇನೆ. ನಾನು ಹೆಮ್ಮೆಯ ಗುಜರಾತಿ, ವಿದೇಶಿಗರು ನವ ಭಾರತದ ಬಗ್ಗೆ ಯೋಚಿಸುವಾಗ, ನವ ಗುಜರಾತ್ ಬಗ್ಗೆ ಯೋಚಿಸುತ್ತಾರೆ. ಈ ರೂಪಾಂತರವು ಹೇಗೆ ಉಂಟಾಯಿತು ಎಂದು ಯೋಚಿಸಿದರೆ ಅದು ಒಬ್ಬ ನಾಯಕನ ಕಾರಣದಿಂದಾಗಿ. ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದವರು ಪ್ರಧಾನಿ ಮೋದಿ. ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಧಾನಿ ಮೋದಿಯವರು ಎಂದು ಶ್ಲಾಘಿಸಿದರು. 

2047 ರ ವೇಳೆಗೆ ಗುಜರಾತ್ ರಾಜ್ಯವೊಂದೇ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ; 2047 ರ ವೇಳೆಗೆ ಭಾರತವು 35 ಟ್ರಿಲಿಯನ್ ಆರ್ಥಿಕತೆಯಾಗುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದರು.

ರಿಲಯನ್ಸ್ ಗುಜರಾತ್ ಕಂಪೆನಿ: ರಿಲಯನ್ಸ್ ಗುಜರಾತಿ ಕಂಪನಿಯಾಗಿಯೇ ಉಳಿದುಕೊಂಡಿದೆ ಮತ್ತು ಮುಂದೆಯೂ ಯಾವಾಗಲೂ ಗುಜರಾತಿ ಕಂಪೆನಿಯಾಗಿಯೇ ಉಳಿಯುತ್ತದೆ. ರಿಲಯನ್ಸ್ ಕಳೆದ 10 ವರ್ಷಗಳಲ್ಲಿ ಭಾರತದಾದ್ಯಂತ ವಿಶ್ವದರ್ಜೆಯ ಆಸ್ತಿ ಮತ್ತು ಸಾಮರ್ಥ್ಯಗಳನ್ನು ಸೃಷ್ಟಿಸಲು 12 ಲಕ್ಷ ಕೋಟಿ ರೂಪಾಯಿ ಮತ್ತು ವಿಶ್ವಾದ್ಯಂತ 150 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದರಲ್ಲಿ 1/ 3ನೇ ಗುಜರಾತಿನಲ್ಲೇ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!