ಆಕರ್ಷಣ್ ಕುಲಾಲ್‌ಗೆ ಬೆಳ್ಳಿ ಪದಕ

ಉಡುಪಿ: ಚೆನೈಯಲ್ಲಿ ಡಿ.11-25ರ ತನಕ ನಡೆದ 61ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 11-14 ವರ್ಷ ವಿಭಾಗದಲ್ಲಿ ಆಕರ್ಷಣ್ ಕುಲಾಲ್ 3000 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಈತ ಕಿರಣ್ ಕುಮಾರ್ ಕುಲಾಲ್ ಹಾಗೂ ಸೌಮ್ಯ ದಂಪತಿಯ ಪುತ್ರ, ಇವರು ಬ್ರಹ್ನಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರವಿಣ್ ಕುಲಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.