ಪರೀಕ: ಹೊಟೇಲ್ ಮ್ಯಾನೇಜರ್ ಹೃದಯಾಘಾತದಿಂದ ನಿಧನ
ಉಡುಪಿ: ಇಲ್ಲಿನ ಆತ್ರಾಡಿ ಪರೀಕ ನಿವಾಸಿ, ಹೊಟೇಲ್ ಮ್ಯಾನೇಜರ್ ಓರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಕಳೆದ ರಾತ್ರಿ ನಡೆದಿದೆ.
ಮಂಗಳೂರಿನ ಹೆಸರಾಂತ ಹೊಟೇಲ್ ಒಂದರ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಶೆಟ್ಟಿ(28) ಅವರಿಗೆ ಸೋಮವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಪರೀಕ ನಿವಾಸಿಯಾದ ಇವರು ಆತ್ರಾಡಿಯಲ್ಲಿ ಡ್ಯಾನ್ಸ್ ಕ್ರಿವ್ ಎಂಬ ನೃತ್ಯ ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಇತ್ತೀಚೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ ಮಹೇಶ ಶೆಟ್ಟಿ ಉಡುಪಿ, ಮಂಗಳೂರಿನ ಹೊಟೇಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ನಿನ್ನೆಯಷ್ಟೇ ಡ್ಯಾನ್ ಕ್ಲಾಸ್ಅನ್ನು ಮತ್ತೆ ಮುನ್ನಡೆಸುವ ಬಗ್ಗೆ ಮಹೇಶ ಶೆಟ್ಟಿ ವಾಟ್ಸ್ಅಪ್ ಸ್ಟೇಟ್ಸ್ ಹಾಕಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಪರೀಕ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ ಅವರು ಆತ್ರಾಡಿ ಹಾಗೂ ಪರ್ಕಳ ಪರಿಸರದಲ್ಲಿ ನೃತ್ಯ ತರಬೇತಿ ನೀಡಿ ಹಲವಾರು ಗ್ರಾಮೀಣ ಮಕ್ಕಳನ್ನು ರಂಗಕ್ಕೆ ಪರಿಚಯ ಮಾಡಿರುತ್ತಾರೆ.
ಮೃತರು ತಂದೆ, ತಾಯಿ, ಓರ್ವ ಸಹೋದರನ್ನು ಅಗಲಿದ್ದಾರೆ.