ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ: ಬಿಜೆಪಿ ಟಿಕೆಟ್‌ಗೆ ಬಿಗ್ ಫೈಟ್

ಉಡುಪಿ, ಜ.9(ಉಡುಪಿ ಟೈಮ್ಸ್ ವರದಿ): ಬಿಜೆಪಿಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾರಿಗೆ ಅವಕಾಶ ನೀಡುತ್ತಾರೆ ಎಂಬ ಚರ್ಚೆ ಪಾರಂಭವಾಗಿದೆ.

ಇನ್ನೇನು ಎರಡು ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗಲಿದೆ. ಆದರೇ,  ಈಗಾಗಲೇ ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವೆಯಾಗಿ ಶೋಬಾ ಕರಂದ್ಲಾಜೆ ಅವರು ಆಗೊಮ್ಮೆ ಈಗೊಮ್ಮೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಹೋಗುವ ಸಂಸದೆ ನಮಗೆ ಬೇಡ್ವೆ ಬೇಡ ಎಂದು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹರಿದಾಡ್ತ ಇದೆ.

ಈ ಬಗ್ಗೆ ಸ್ವತಃ ಪಕ್ಷದ ಕಾರ್ಯಕರ್ತರೆ ಹಲವು ಕ್ಯಾಂಪೇನ್‌ಗಳನ್ನು ಶೋಭಾ ಕರಂದ್ಲಾಜೆ ಅವರ ವಿರುದ್ಧವಾಗಿ ಮಾಡಿದ್ದರು.

ಹತ್ತು ವರ್ಷಗಳ ಕಾಲ ಯಾವುದೇ ಜನಪರ ಯೋಜನೆಯನ್ನು ಸಂಸದರಾಗಿ, ಕೇಂದ್ರ ಸಚಿವರಾಗಿ ಜಿಲ್ಲೆಗೆ ಹೊಸ ಯೋಜನೆ ತರಿಸುವಲ್ಲಿ ವಿಫಲವಾಗಿರುವುದೇ ಕಾರ್ಯಕರ್ತರ, ಮತದಾರರ ಮುನಿಸಿಗೆ ಕಾರಣ ಎನ್ನಲಾಗಿದೆ. ಮಾತ್ರವಲ್ಲದೆ ಮಲ್ಪೆ- ಮೊಳಕಾಲ್ಮುರು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಆಗಿ ಹತ್ತು ವರ್ಷ ಆದರೂ ಇನ್ನೂ ಸಂಪೂರ್ಣ ಆಗದೆ ಇರುವಂತಹುದು, ಇಂದ್ರಾಳಿ ರೈಲ್ವೆ ಸೇತುವೆ, ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ವಿಳಂಬದಿಂದ ವಾಹನ ಸವಾರರು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದರೂ, ಯಾವುದಕ್ಕೂ ತನಗೆ ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಕಾಂಗ್ರೆಸ್‌‌ನಿಂದಾ ಜೆ.ಪಿ ಹೆಗ್ಡೆ ಅವರಿಗೆ ಟಿಕೆಟ್ ಫಿಕ್ಸ್ ಎಂದು ಎಲ್ಲಾ ಕಡೆ ಈಗಾಗಲೇ ಸುದ್ದಿ ಹರಿದಾಡುತ್ತಿದೆ, ಬಹು ಜನ ಬೆಂಬಲ ಇರುವ ಜೆ.ಪಿ ಹೆಗ್ಡೆ ಅವರಿಗೆ ಕಾಂಗ್ರೆಸ್‌ನಿಂದಾ ಟಿಕೆಟ್ ಸಿಕ್ಕಿದ್ರೆ ಬಿಜೆಪಿ ಇಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ರೆ ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆದ್ದೇ ಗೆಲ್ಲುತದೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಾ ಇದೆ.

ಆದರೇ ಕಾಂಗ್ರೆಸ್‌ನಲ್ಲೂ ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕುವ‌ ಸಾಧ್ಯತೆ ಇದ್ದು, ಯುವ‌ನಾಯಕ, ಉತ್ತಮ‌ ವಾಗ್ಮಿ, ಸಂಘಟನಾ ಚತುರ ಸುಧೀರ್ ಕುಮಾರ್ ಮುರೋಳ್ಳಿ ಹೆಸರು ಕೂಡ ಕೇಳಿ ಬರುತ್ತಿದ್ದೆ. ಇನ್ನೊಂದೆಡೆ ಮಾಜಿ ಸಚಿವ, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಅವರು ಕೂಡ ನನಗೆ ಸಂಸದನಾಗಿ ಕ್ಷೇತ್ರದಲ್ಲಿ ದುಡಿದ ಅನುಭವ ಇದೆ. ನನಗೂ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಎನ್ನುವ ಆಕಾಂಕ್ಷೆಯನ್ನು ಹೈಕಮಾಂಡ್ ಮುಂದೆ ಇರಿಸಿದ್ದಾರೆ. ಕೊನೆ ಪಕ್ಷ ಮಂಗಳೂರು ಆದರೂ ಸ್ಪರ್ಧೆಗೆ ಸಿದ್ದ ಎನ್ನುವುದನ್ನು ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯಿಂದಲೂ ಕೂಡ ಈ ಬಾರಿ ಹೊಸಮುಖಕ್ಕೆ ಮಣೆ ಹಾಕುವ ಸಾಧ್ಯತೆ….?

ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನಲ್ಲಿ ಗೆದ್ದು ಬಂದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಈ ಭಾರಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಹ್ಯಾಟ್ರಿಕ್ ಗೆಲುವಿನ ತಡೆಯಾಗಬಹುದು ಎನ್ನುವುದು ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರ ಲೆಕ್ಕಾಚಾರ ಆಗಿದೆ.

ಆದ್ದರಿಂದ ಈ ಬಾರಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿಯಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿದರೆ ಸ್ವತಃ ಅವರ ವರ್ಚಸಿನಿಂದ ಹಾಗೂ ಪ್ರಧಾನಿ ಮೋದಿಯವರು ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ರೀತಿಯನ್ನು ಬೆಂಬಲಿಸಿ ಮತದಾರರು ಬಿಜೆಪಿ ಪಕ್ಷಕ್ಕೆ ಬಹುಪರಾಕ್ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುವುದು ಜಿಲ್ಲೆಯ ಮತದಾರರ ಅಂಬೋಣ.

ಶಾಸಕರಾಗಿ, ಮಂತ್ರಿಯಾಗಿ, ಜನ ಸೇವೆಗೈದ, ಉಡುಪಿಯವರೇ ಆದ ಪ್ರಮೋದ್ ಮಧ್ವರಾಜ್ ಅವರು ನಾನು ಕೂಡ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ ಎಂದು ತುಂಬಾ ಸಮಯದ ಹಿಂದೆ ಘೋಷಣೆ ಮಾಡಿದ್ದಾರೆ.

ಪ್ರಮೋದ್ ಮಧ್ವರಾಜ್, ಕಾಂಗ್ರೆಸ್‌ನಿಂದಾ ಬಂದವರದ್ರು ಕೂಡ, ಮೋದಿ ಅವರ ಮೇಲೆ ಇರುವ ಅಪಾರ ಗೌರವವನ್ನು ಹಲವಾರು ಬಾರಿ ಹಲವಾರು ಸಂದರ್ಭಗಳಲ್ಲಿ ವ್ಯಕ್ತಪಡಿಸಿದವರು ಹಾಗಾಗಿ ಅಪಾರ ಕಾರ್ಯಕರ್ತರ ಬೆಂಬಲ ಇರುವ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಮನವಿ ಪತ್ರಗಳು ಸಲ್ಲಿಕೆಯಾಗಿದೆ. ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ಕೊಡುವುದು ಫೈನಲ್ ಎಂದು ತುಂಬಾ ಜನರ ಅಭಿಪ್ರಾಯ.

Leave a Reply

Your email address will not be published. Required fields are marked *

error: Content is protected !!