ಅತಿಥಿ ಉಪನ್ಯಾಸಕರಿಗೆ 8ಸಾವಿರ ರೂ. ಗೌರವಧನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮುಷ್ಕರ ವಾಪಸ್

ಬೆಂಗಳೂರು : ಗೌರವಧನವನ್ನು5 ರಿಂದ 8 ಸಾವಿರ ರೂ.ಗೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ, ಜೊತೆಗೆ ವೇತನ ಸಹಿತ ಹೆರಿಗೆ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಮೂರು ತಿಂಗಳವರೆಗೆ ವಿಸ್ತರಿಸಲು ಸಮ್ಮತಿ ನೀಡಲಾಗಿದೆ.

ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದು, ಸೋಮವಾರದಿಂದ ತರಗತಿಗಳಿಗೆ ಮರಳುವ ಸಾಧ್ಯತೆಯಿದೆ. ಕಾನೂನಾತ್ಮಕ ತೊಡಕುಗಳಿಂದಾಗಿ ಸೇವೆಗಳನ್ನು ಕಾಯಂಗೊಳಿಸುವುದನ್ನು ಹೊರತುಪಡಿಸಿ, ಮಾನವೀಯ ಆಧಾರದ ಮೇಲೆ ಅವರ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಐದು ವರ್ಷಕ್ಕಿಂತ ಕಡಿಮೆ ಕೆಲಸದ ಅನುಭವ ಹೊಂದಿರುವ ಉಪನ್ಯಾಸಕರಿಗೆ 5,000 ರೂ., 5-10 ವರ್ಷಗಳ ಅನುಭವ ಹೊಂದಿರುವವರಿಗೆ 6,000 ರೂ. 10-15 ವರ್ಷ ಸೇವೆ ಸಲ್ಲಿಸಿದವರಿಗೆ 7 ಸಾವಿರ ಹಾಗೂ 15 ವರ್ಷ ಮೇಲ್ಪಟ್ಟವರಿಗೆ 8 ಸಾವಿರ ರೂ. ಏರಿಕೆಯಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!