ಜನವರಿ 14 ಮಕರ ಸಂಕ್ರಮಣದ ದಿನ ಉದ್ಯಾವರದಲ್ಲಿ “ಸಾಗರ ಸಂಗಮ”

ಉಡುಪಿ: ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ಸಾರಥ್ಯದಲ್ಲಿ ಈ ವರ್ಷದ ಮಕರ ಸಂಕ್ರಮಣದ ದಿನದಂದು (ಜ.14) ಈ ಬಾರಿಯ ಬಡಗುತಿಟ್ಟು ಯಕ್ಷಗಾನ ಮೇಳದಲ್ಲಿ ಯಶಸ್ವಿಯಾಗಿ ಮೂಡಿಬಂದ ಶ್ರೀನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರ ಶ್ರೀ ದೇವದಾಸ್ ಈಶ್ವರಮಂಗಲ ವಿರಚಿತ “ಸಾಗರ ಸಂಗಮ” ಎಂಬ ಯಶಸ್ವೀ ಯಕ್ಷಗಾನ ಪ್ರದರ್ಶನ ಉಡುಪಿ ಉದ್ಯಾವರದ ಗುಡ್ಡೆಯಂಗಡಿಯಲ್ಲಿ ನಡೆಯಲಿದೆ.

ಕಾಲಮಿತಿಯ ಅವಧಿಯಲ್ಲಿ ನಡೆಯುವ ಈ ಯಕ್ಷಗಾನ ಪ್ರದರ್ಶನದ ಮೆಕ್ಕೆಕಟ್ಟು ಮೇಳದಲ್ಲಿ ಪ್ರಖ್ಯಾತ ಕಲಾವಿದರಾದ ವಿದ್ಯಾದರ ಜಲವಳ್ಳಿ ರಾವ್, ಕನ್ನಿಮನೆ ಕಾರ್ತಿಕ್ ಭಟ್, ಚಿಟ್ಟಾಣಿ ಸುಬ್ರಮಣ್ಯ ಹೆಗಡೆ, ನೀಲ್ಗೋಡು ಶಂಕರ ಹೆಗಡೆ, ರಮೇಶ್ ಭಂಡಾರಿ ಮುಂತಾದವರು ಪಾತ್ರದಾರಿಗಳಾಗಿ ಮಿಂಚಲಿದ್ದಾರೆ .

ಕಳೆದ ವರ್ಷದ ಮಕರ ಸಂಕ್ರಮಣ ದಿನದಂದು ಶ್ರೀಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮಾಡಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದ ಶ್ರೀನಾರಾಯಣ ಗುರು ಯುವ ವೇದಿಕೆ, ಶ್ರೀ ನಾರಾಯಣ ಗುರುಗಳ ಚರಿತ್ರೆ ಆಧಾರಿತ ಶೂದ್ರ ಶಿವ ನಾಟಕ ಪ್ರದರ್ಶನ ಕೂಡ ಯಶಸ್ವಿಯಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.

ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ದಿಕ್ಕಿನಲ್ಲಿ ಸಾಗುತ್ತಿರುವ ಶ್ರೀನಾರಾಯಣ ಗುರು ಯುವ ವೇದಿಕೆಯ ಈ ವರ್ಷದ ಸಾಗರ ಸಂಗಮ ಯಕ್ಷಗಾನ ಕಾರ್ಯಕ್ರಮ ಕೂಡ ಹಲವಾರು ವೈವಿಧ್ಯಗಳಿಂದ ಮೂಡಿಬರಲಿದೆ ಎಂದು ನಾರಾಯಣ ಗುರು ಯುವ ವೇದಿಕೆಯ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!