ಉಡುಪಿ ಯಶೋದ ಆಟೋ ಚಾಲಕರ/ಮಾಲಕರ ಸಂಘ: ಸೋಲಾರ್ ದೀಪ ಉದ್ಘಾಟನೆ
ಉಡುಪಿ: ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜಿಲ್ಲಾಧ್ಯಕ್ಷರಾದ ಕೆ. ಕೃಷ್ಣಮೂರ್ತಿಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ಶುಕ್ರವಾರ ದೊಡ್ಡಣಗುಡ್ಡೆ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಕ್ಕೆ ಸೋಲಾರ್ ದೀಪ ಕೊಡುಗೆ ನೀಡಲಾಯಿತು.
ಜಿಲ್ಲಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ ರವರು ಸೋಲಾರ್ ದೀಪವನ್ನು ಬೆಳಗುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಆರ್ ಕೆ ರಮೇಶ್, ಚರಣ್ ರಾಜ್ ಬಂಗೇರ, ಜಯರಾಜ್ ಸೇರಿಗಾರ್,ಮಹಮ್ಮದ್ ರಫೀಕ್, ಕೃಷ್ಣ ಮೋಹನ್ ಚೌಧಿರಿ ದೊಡ್ಡಣಗುಡ್ಡೆ ಆಟೋ ನಿಲ್ದಾಣದ ಅಧ್ಯಕ್ಷರಾದ ಮಹಮ್ಮದ್ ರಿಯಾಜ್, ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ರತ್ನಾಕರ್, ಕೋಶಾಧಿಕಾರಿ ಉಮೇಶ್ ಕಿಣಿ ಹಾಗೂ ಯಶೋಧ ಆಟೋ ಯೂನಿಯನ್ ಪದಾಧಿಕಾರಿಗಳಾದ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಉದಯ್ ಪಂದುಬೆಟ್ಟು, ಸಂತೋಷ್ ಸೇರಿಗಾರ್ ರಿಕ್ಷಾ ನಿಲ್ದಾಣ ಸದಸ್ಯರುಗಳಾದ ರಾಘವೇಂದ್ರ ದೇವಾಡಿಗ, ರಮೇಶ್ ಜೋಗಿ, ರಾಘು ಪೂಜಾರಿ, ಯಾಸಿನ್, ಶಶಿಕಾಂತ್ ಉಪಸ್ಥಿತಿದ್ದರು.