ಕಾರ್ಕಳ: ಜ.7ರಂದು ಪತ್ರಕರ್ತ ಸಾಹಿತಿ ಡಾ. ಶೇಖರ ಅಜೆಕಾರು ನೆನಪು ಕಾರ್ಯಕ್ರಮ
ಕಾರ್ಕಳ: ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪ್ರತಿಮ ಸೇವೆ ಸಲ್ಲಿಸಿ ಅಗಲಿದ ಖ್ಯಾತ ಪತ್ರಕರ್ತ ಡಾ. ಶೇಖರ ಅಜೆಕಾರು ನೆನಪು ಕಾರ್ಯಕ್ರಮ ಕಾರ್ಕಳ ಅನಂತ ಶಯನದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜನವರಿ 7ರಂದು ಸಂಜೆ 3.30 ಗಂಟೆಗೆ ಸರಿಯಾಗಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಮೂಡಬಿದರೆ ಎಸ್.ಕೆ.ಎಫ್ ಉದ್ಯಮ ಸಮೂಹದ ಆಡಳಿತ ನಿರ್ದೇಶಕ ಡಾ. ಜಿ. ರಾಮಕೃಷ್ಣ ಆಚಾರ್, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಡಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಮ್ಮನ್ನಗಲಿದ ಡಾ. ಶೇಖರ್ ಅಜೆಕಾರ್ ಅವರ ಪುಟ್ಟ ಮಕ್ಕಳಿಗೆ ಆರ್ಥಿಕ ಸಹಾಯ ನೀಡಲು ಇಚ್ಚಿಸುವವರು ಕ್ಯೂ ಆರ್ ಕೋಡ್ ಬಳಸಿ ನೆರವು ನೀಡಲು ಕೋರಲಾಗಿದೆ. ಸರ್ವರೂ ಡಾ.ಶೇಖರ ಅಜೆಕಾರು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.