ಉಡುಪಿ: ಚೆಕ್ ಬೌನ್ಸ್ ಪ್ರಕರಣ ಶಿಕ್ಷಣ ಸಚಿವರು ರಾಜೀನಾಮೆಗೆ ಎಬಿವಿಪಿ ಆಗ್ರಹ

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಚೆಕ್ ಬೌನ್ಸ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧುಬಂಗಾರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ ಮಾತನಾಡಿ ಭಾರತದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ನಂಬಿರುವ ನಾವುಗಳು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಶಿಕ್ಷಣ ಸಚಿವನಾಗಿ ಮುಂದುವರೆಯುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕಿ ತಂದಿರುವ ಮಧು ಬಂಗಾರಪ್ಪ ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ.ನಗರ ಸಹಕಾರ್ಯದರ್ಶಿಯಾದ ಕಾರ್ತಿಕ್, ಶಶಾಂಕ್ ವಿಭಾಗ ಎಸ್.ಎಫ್.ಡಿ. ಪ್ರಮುಖ ಶ್ರೀಹರಿ ಮತ್ತು ನಗರ ಕಾರ್ಯಾಲಯ ಪ್ರಮುಖ್ ಅನಂತ್ ಕೃಷ್ಣ ಪ್ರಮುಖರಾದ ನವೀನ್, ಸ್ವಸ್ತಿಕ್, ಧನ್ಯ, ಆದಿತ್ಯ, ಲ್ಯಾರಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!