ನಿಟ್ಟೆ: ಗ್ರಂಥಾಲಯ ಮತ್ತು ನವೀಕರಿಸಿದ ಮಾಹಿತಿ ಕೇಂದ್ರದ ಉದ್ಘಾಟನೆ
ನಿಟ್ಟೆ ಪರಿಗಣೆತ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನವೀಕರಿಸಿದ ಆವರಣದ ಉದ್ಘಾಟನೆ ಇಂದು ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ನಿರಂಜನ್ ಚಿಪ್ಲೂಂನ್ಕರ್ ರವರ ಉಪಸ್ಥಿತಿಯಲ್ಲಿ ಹಿರಿಯರಾದ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಪ್ರೊ.ಭಾಮೀ ಶೆಣೈ ಉದ್ಘಾಟಿಸಿ, ಮಾತನಾಡಿದರು.
ನಿಟ್ಟೆ ವಿದ್ಯಾಸಂಸ್ಥೆಯ ನಿರ್ಮಾತೃ ಕೀರ್ತಿಶೇಷ ಜಸ್ಟೀಸ್ ಕೆ.ಎಸ್.ಹೆಗ್ಡೆಯವರ ಭಾವಚಿತ್ರವನ್ನು ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಸಂಶೋಧನಾ ಘಟಕದ ನಿರ್ದೇಶಕರಾದ ಡಾ. ಶ್ರೀನಿಕೇತನ್ ಅನಾವರಣ ಗೊಳಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಡಾ. ರೇಖಾ ಭಂಡಾರ್ಕರ್, ಪರೀಕ್ಷಾಂಗ ಉಪ ನಿಯಂತ್ರಕರಾದ ಡಾ. ಸುಬ್ರಹ್ಮಣ್ಯ ಭಟ್, ಕಾಲೇಜಿನ ಪೂರ್ವ ಗ್ರಂಥಪಾಲಕ ಯಾಜಿ ಡಾ. ದಿವಾಕರ ಭಟ್, ವಿವಿಧ ವಿಭಾಗ ಮುಖ್ಯಸ್ಥರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಾಲೀ ಗ್ರಂಥಪಾಲಕ ಡಾ. ಪ್ರೀತಮ್ ಶೆಟ್ಟಿ ಕೆ.ವಿ ಸ್ವಾಗತಿಸಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಿಬ್ಬಂದಿಗಳು ಸಹಕರಿಸಿದರು.