ಉದ್ಯಾವರ: ಟ್ಯಾಂಕರ್ ಡಿಕ್ಕಿ- ಕೆಮ್ತೂರು ನಿವಾಸಿ ಮೃತ್ಯು
ಕಾಪು : ಪಾದಚಾರಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ರಾತ್ರಿ ಉದ್ಯಾವರದಲ್ಲಿ ನಡೆದಿದೆ.
ಪಿತ್ರೋಡಿಯ ಹೋಲೋ ಬ್ಲಾಕ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಕೆಮ್ತೂರು ನಿವಾಸಿ ಜಯ ದೇವಾಡಿಗ (64) ಮೃತ ವ್ಯಕ್ತಿ.
ಜಯ ಅವರು ಶನಿವಾರ ಸಂಜೆ ಕೆಲಸ ಮುಗಿಸಿ ಭಗವತಿ ಹಾರ್ಡ್ವೇರ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಜಯ ದೇವಾಡಿಗ ಅವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.