ಉಡುಪಿಯ ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಮಿಸ್‌ ಫೈರಿಂಗ್‌: ಸಿಬ್ಬಂದಿಗೆ ಗಾಯ


ಉಡುಪಿ, ಡಿ.30(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಇಂದು ಮಧ್ಯಾಹ್ನ ಮಿಸ್‌ ಫೈರಿಂಗ್‌ ಆದ ಪರಿಣಾಮ ಸಿಬ್ಬಂದಿಯೋರ್ವರು ಗಾಯಗೊಂಡ ಘಟನೆ ನಡೆದಿದೆ.

ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್‌ ಪತ್ತೆಯಾಗಿತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ಯಾರದ್ದು? ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಅನ್ನೋದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!