ಉಡುಪಿ: ಶ್ರೀಕೃಷ್ಣ ದೇವರಿಗೆ 4.5 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಅರ್ಪಣೆ
ಉಡುಪಿ: ಶ್ರೀಕೃಷ್ಣದೇವರಿಗೆ ತೆಲಂಗಾಣದ ಆರ್. ಸ್ವಾಮಿನಾಥನ್ ಎನ್ನುವ ಭಕ್ತರೋರ್ವರು ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ನೀಡಿದ್ದು, ಅದನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು. ಕೀರಿಟವನ್ನು ಇಂದು ಶ್ರೀಕೃಷ್ಣ ದೇವರಿಗೆ ತೊಡಿಸಲಾಯಿತು.