ಬ್ರಹ್ಮಾವರ: 300 ರೂ. ಸಾಲ ವಾಪಾಸ್ಸು ಕೇಳಿದಕ್ಕೆ ತಂದೆ ಮಗನಿಗೆ ಹಲ್ಲೆ
ಬ್ರಹ್ಮಾವರ, ಡಿ.28: ಸಾಲಾ ವಾಪಾಸ್ಸು ಕೇಳಿದಕ್ಕೆ ತಂದೆ ಹಾಗೂ ಮಗನಿಗೆ ಹಲ್ಲೆ ನಡೆಸಿರುವ ಘಟನೆ ಡಿ.26ರಂದು ರಾತ್ರಿ 8.30ರ ಸುಮಾರಿಗೆ ಬಾರಕೂರು ನಾಯರ್ ಪೆಟ್ರೋಲ್ ಬಂಕ್ ಎದುರು ನಡೆದಿದೆ.
ಹಲ್ಲೆಗೊಳಗಾದವರನ್ನು ಬಾರಕೂರಿನ ಮುಹಮ್ಮದ್ ಮುಫೀಝ್(19) ಹಾಗೂ ಅವರ ತಂದೆ ಫಕೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಮುಫೀಝ್ ತನ್ನ ತಂದೆ ಜೊತೆ ಇದ್ದಾಗ ಪರಿಚಯದ ಪ್ರಮೋದ್ನನ್ನು ನೋಡಿ ಸಾಲದ ಹಣ 300ರೂ. ವಾಪಾಸು ಕೇಳಿದರೆನ್ನಲಾಗಿದೆ.
ಅದಕ್ಕೆ ಅವಾಚ್ಯವಾಗಿ ಬೈದು ಮುಫೀಝ್ಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಅವರ ತಂದೆಗೆ ಅಲ್ಲೇ ಇದ್ದ ರಿಕ್ಷಾ ಚಾಲಕ ಹಲ್ಲೆ ನಡೆಸಿದನು. ಬಳಿಕ ಅವರಿಬ್ಬರು ರಿಕ್ಷಾದಲ್ಲಿ ಅಲ್ಲಿಂದ ಪರಾರಿಯಾದರೆಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.