ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ವಾರ್ಷಿಕೋತ್ಸವ- ದಾನಿಗಳಿಗೆ ಸನ್ಮಾನ

ಹೆಬ್ರಿ: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶನಿವಾರ ಜರುಗಿತು. ವಾರ್ಷಿಕೋತ್ಸವವನ್ನು ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್‌ ಅಮೀನ್‌ ಉದ್ಘಾಟಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕೋತ್ಸವ ಮತ್ತು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಉದ್ಯಮಿಗಳಾದ ಪಡುಪರ್ಕಳ ಶಂಕರ ಶೆಟ್ಟಿ, ಕೃಷ್ಣ ಟಿ. ಶೆಟ್ಟಿ, ವರಂಗ ಗ್ರಾ. ಪಂಚಾಯಿತಿ ಸದಸ್ಯರಾದ ತಾರಾವತಿ ಶೆಟ್ಟಿ, ಸಂತೋಷ ನಾಯ್ಕ್‌, ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ ಹೆಗ್ಡೆ, ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ. ಮಂಜುನಾಥ್‌, ವರಂಗ ಗ್ರಾಮ ಪಂಚಾಯಿತಿ ಸದಸ್ಯರಾದ ಉದ್ಯಮಿ ಗೋಪಿನಾಥ ಭಟ್‌, ಬೋಪಾಲ್‌ ಉದ್ಯಮಿ ಪ್ರಸನ್ನ ಶೆಟ್ಟಿ ಎಳಗೋಳಿ, ಮುಂಬಯಿ ಉದ್ಯಮಿ ಬಾಲಕೃಷ್ಣ ಶೆಟ್ಟಿ, ಮುನಿಯಾಲು ಲಯನ್ಸ್‌ ಕ್ಲಬ್‌ ಸದಸ್ಯ ಶಂಕರ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಉದ್ಯಮಿ ಪಡುಪರ್ಕಳ ಹರೀಶ ಶೆಟ್ಟಿ, ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲ, ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮದ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್‌ ಶಿವಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಶಿಕ್ಷಕರ ಸಂಘದ ಕಾರ್ಕಳದ ಅಧ್ಯಕ್ಷ ರಮಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಂಡಾರಿ, ಸರ್ಕಾರಿ ನೌಕರರ ಸಂಘದ ಹೆಬ್ರಿ ಘಟಕದ ಅಧ್ಯಕ್ಷ ಹರೀಶ ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ, ಮುಖ್ಯ ಶಿಕ್ಷಕ ಮಹೇಶ ಉಪಾಧ್ಯ, ಶೌರ್ಯ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರ ಶೆಟ್ಟಿ, ವಿದ್ಯಾರ್ಥಿ ನಾಯಕಿ ಮಾನ್ವಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹರೀಶ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಸಂಘದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ ಪೂಜಾರಿ ಮಾತಿಬೆಟ್ಟು ಮತ್ತು ರಂಜಿತಾ ಪಡುಕುಡೂರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!