ಬ್ರಿಟಿಷರ ಬೂಟು ನೆಕ್ಕುವವರಿಂದ ನಾವು ಕಲಿಯಬೇಕಿಲ್ಲ: ಬಿಕೆ ಹರಿಪ್ರಸಾದ್
ಹುಬ್ಬಳ್ಳಿ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು, ಬ್ರಿಟಿಷರ ಬೂಟು ನೆಕ್ಕುತ್ತಾ ಇದ್ದವರಿಂದ ಬೇರೆ ಏನೂ ನಾವು ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಬಿಜೆಪಿಗೆ ಮಹಿಳೆಯರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲ. ನಮ್ಮದು ಜ್ಯಾತ್ಯಾತೀತ ರಾಷ್ಟ್ರ ಆದ್ದರಿಂದ ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು. ಸಂವಿಧಾನ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತದೆ. ನಾವು ತುಷ್ಟೀಕರಣ ಮಾಡುತ್ತಿಲ್ಲ, ಬದಲಾಗಿ ಬಹು ಸಂಖ್ಯಾತರ ತುಷ್ಟೀಕರಣ ಮಾಡಿಕೊಂಡು ಬಿಜೆಪಿ ಪಕ್ಷ ಕಳೆದ 10 ವರ್ಷಗಳ್ಲಿ ಸುಳ್ಳು ಮತ್ತು ಹಿಂಸೆಯನ್ನು ಪ್ರಚಾರ ಮಾಡುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪ ಸಂಖ್ಯಾತರ ಮೀಸಲಾತಿ ವಿಚಾರದಲ್ಲಿ ಇವರ ವಿರೋಧ. ನಾಗಪುರದಲ್ಲಿ ಇರುವ ಇವರ ಸೂತ್ರಧಾರರು ಜಾತಿ ಗಣತಿ ವಿರೋಧಿಗಳು. ಇವರಿಂದ ನಾವ ಕಲಿಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
Thu. Nan hale ekkada.. Neenobba manush yaa..