ಸೌದಿಯಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಡ್ರೋನ್ ದಾಳಿ

ಲಂಡನ್: ಸೌದಿ ಆರೇಬಿಯದ ಬಂದರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ತೈಲ ಟ್ಯಾಂಕರ್ ಹಡಗೊಂದರ ಮೇಲೆ ಗುಜರಾತ್‌ನ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿದೆ.

ಸ್ಫೋಟದಿಂದಾಗಿ ಹಡಗಿಗೆ ಬೆಂಕಿ ಹತ್ತಿಕೊಂಡಿದ್ದು, ಯಾವುದೇ ಸಾವುನೊವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕಚ್ಚಾ ತೈಲವನ್ನು ಹೊತ್ತುಕೊಂಡು ಮಂಗಳೂರಿಗೆ ಬರುತ್ತಿದ್ದ ಎಂ.ವಿ.ಚೆಮ್ ಪ್ಲೊಟೊ ಎಂಬ ಹೆಸರಿನ ಈ ಹಡಗಿನ ಸಿಬ್ಬಂದಿಯಲ್ಲಿ 20 ಮಂದಿ ಭಾರತೀಯರೂ ಇದ್ದಾರೆಂದು ವರದಿ ತಿಳಿಸಿದೆ.

ಗುಜರಾತ್‌ನ ವೆರಾವಲ್ ನಗರದ ನೈರುತ್ಯಕ್ಕಿರುವ ಅರಬ್ಬಿ ಸಮುದ್ರದಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದ್ದು ಹಡಗಿಗೆ ಸ್ವಲ್ಪಹಾನಿಯಾಗಿದೆ ಎಂದು ಎರಡು ಸಮುದ್ರಯಾನ ಸಂಸ್ಥೆಗಳು ಶನಿವಾರ ವರದಿ ಮಾಡಿವೆ. ಲಿಬಿಯಾ ಧ್ವಜ ಹೊಂದಿದ್ದ ಈ ತೈಲ ಟ್ಯಾಂಕರ್ ನೌಕೆ ಇಸ್ರೇಲ್‌ಗೆ ಸಂಬಂಧಿಸಿದೆ. ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಚನಾತ್ಮಕ ಹಾನಿಯ ಜತೆಗೆ ಸ್ವಲ್ಪ ನೀರು ಕೂಡಾ ಹಡಗಿನೊಳಗೆ ನುಗ್ಗಿದೆ ಎಂದು

ಡ್ರೋನ್ ದಾಳಿಗೊಳಗಾದ ಹಡಗಿನ ನಾವಿಕರ ರಕ್ಷಣೆಗಾಗಿ ಭಾರತೀಯ ತಟರಕ್ಷಣಾ ದಳದ ‘ಐಸಿಜಿಎಸ್ ವಿಕ್ರಮ್’ ಹಡಗು ಧಾವಿಸುತ್ತಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.ಗುಜರಾತ್‌ನ ಪೋರ್‌ಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲುದೂರದ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ. ಡ್ರೋನ್ ದಾಳಿ ಘಟನೆಯ ಹಿನ್ನೆಲೆಯಲ್ಲಿ ತಟರಕ್ಷಣಾ ದಳವು ಆ ಪ್ರದೇಶದಲ್ಲಿರುವ ಎಲ್ಲಾ ಹಡಗುಗಳನ್ನು ಎಚ್ಚರದಲ್ಲಿರಿಸಿದೆ. ದಾಳಿಗೊಳಗಾದ ಹಡಗಿನ ಎಲ್ಲಾ ನಾವಿಕ ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ಅದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!