ಕೆನರಾ ಸಮೂಹ ಶಿಕ್ಷಣ ಸಂಸ್ಥೆ: ಕೆನರಾ ಎಕ್ಸ್ಪೋ – 2023 ಉದ್ಘಾಟನೆ

ಮಂಗಳೂರು: ಡಿ 23, ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಯೋಜನೆಯಲ್ಲಿ ಮೂಡಿ ಬಂದ ವಿಶಿಷ್ಟ ಪೂರ್ಣ ವಸ್ತು ಪ್ರದರ್ಶನ- ಕೆನರಾ ಎಕ್ಸ್ಪೋ 2023 ಶನಿವಾರದಂದು ಕೆನರಾ ಪ್ರೌಢಶಾಲೆ,ಕೊಡಿಯಾಲ್ ಬೈಲ್ ಇಲ್ಲಿ ಉದ್ಘಾಟನೆಗೊಂಡಿತು.

ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಸುಧಾಕರ್ ಕೊಠಾರಿ ಉದ್ಘಾಟನೆ ಮಾಡಿದರು.ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ಮುನ್ನ ದಿನ ಜರುಗಿದ ಈ ವಿಶಿಷ್ಟ ಪೂರ್ಣ ಕಾರ್ಯಕ್ರಮವು ಸಾರ್ವಜನಿಕರ ಮನಸೆಳೆಯಿತು. ಕೆನರಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡ ಹಳೆ ವಿದ್ಯಾರ್ಥಿಗಳಿಗೆ ತಮ್ಮ ನಾವಿನ್ಯತೆ, ಸೃಜನಶೀಲತೆ, ಕೌಶಲಗಳನ್ನು ಅನಾವರಣಗೊಳಿಸಲು ಹಾಗೂ ಮತ್ತೊಮ್ಮೆ ವಿದ್ಯಾಸಂಸ್ಥೆಯೊಂದಿಗೆ ತಮ್ಮ ಸಂಬಂಧಗಳನ್ನು ನವೀಕರಿಸಲು ಈ ಕಾರ್ಯಕ್ರಮವು ಅತ್ಯುತ್ತಮ ವೇದಿಕೆಯಾಗಿ ರೂಪುಗೊಂಡಿತು. ಕೇಂದ್ರ ಸರ್ಕಾರವು ಉತ್ತೇಜಿಸಿದ ಸ್ಟಾರ್ಟ್ ಅಪ್ ಆಲೋಚನೆಗಳಿಗೆ ಯೋಜನೆಯ ರೂಪ ಕೊಟ್ಟು ತಯಾರಿಸಿದ ವಿವಿಧ ಪ್ರಾಜೆಕ್ಟ್ ಗಳು, ವೈವಿಧ್ಯಪೂರ್ಣ ಆಹಾರ ವಿಚಾರಗಳು ಈ ಕಾರ್ಯಕ್ರಮದಲ್ಲಿ ಕಂಡು ಬಂದವು. ಎಲೆಕ್ಟ್ರಿಕ್ ತ್ರಿ ಚಕ್ರ ಹೊಸ ವಿನ್ಯಾಸ ವಾಹನಗಳ ಮಾದರಿ, ಪುಸ್ತಕಮಳಿಗೆ, ವಿವಿಧ ಪಾನಿಯ ಆಹಾರ ವಿವಿಧ ವಿನ್ಯಾಸದ ಕೆನರಾ ಬ್ರಾಂಡ್ ನ ಬಟ್ಟೆ, ಪೈ ದ್ವಿ ಚಕ್ರ ಶೋರೂಂ,ಕೆನರಾ ಬ್ಯಾಂಕ್, ಪೀಠೋಪಕರಣ, ಎಸ್ ಕೆ ಟ್ರೇಡರ್ಸ್, ಅಮೋಘ ಗಾರ್ಮೆಂಟ್ಸ್, ಡೇ ಟು ಡೇ ಡಿಜಿಟಲ್, ವೇದಾಮರೋಗ್ಯ, ಎಸ್ ಎಲ್ ಶೇಟ್ ಡೈಮಂಡ್ಸ್,ಫೋರ್ ಟೀಕ್ ಸೊಲ್ಯೂಷನ್ಸ್,ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ಸ್,ಶ್ರೇಯಸ್ ಸ್ವೀಟ್ಸ್, ಹೀಗೆ ಅನೇಕ ಪ್ರಮೋಷನ್ ಮಳಿಗೆಗಳು, ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು.ಸಂಜೆ ಹಳೆಯ ವಿದ್ಯಾರ್ಥಿಗಳಿಂದ ಕನ್ನಡ ಹಿಂದಿ ಹಳೆಯ, ಹೊಸ ಚಲನಚಿತ್ರ ಗೀತೆಗಳು ಹಾಗೂ ವಿವಿಧ ಹಾಡುಗಳು ಕರೋಕೆ ಮೀಟ್ ಕಾರ್ಯಕ್ರಮವು ನಡೆಯಿತು.

ಕೆನರಾ ಆಡಳಿತ ಮಂಡಳಿಯ ಕಾರ್ಯದರ್ಶಿ ರಂಗನಾಥ ಭಟ್, ಜಂಟಿ ಕಾರ್ಯದರ್ಶಿಗಳಾದ ಸುರೇಶ್ ಕಾಮತ್ ಹಾಗೂ ಗೋಪಾಲಕೃಷ್ಣ ಶೆಣೈ, ಕೆನರಾ ವಿಕಾಸ ಕಾಲೇಜಿನ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿ ಕಾಲೇಜಿನ ಮ್ಯಾನೇಜರ್ ಶಿವಾನಂದ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ, ಅಶ್ವಿನಿ ಶೆಣೈ, ಕೆನರಾ ಆಂಗ್ಲ ಪ್ರಾಥಮಿಕ ಶಾಲೆ ಹಾಗೂ ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿಯ ಮ್ಯಾನೇಜರ್ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಓ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದರು.

Leave a Reply

Your email address will not be published. Required fields are marked *

error: Content is protected !!