ಉಡುಪಿ: ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್ ದಾಳಿ- ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಯಾವುದೇ ಅನುಮತಿ ಪಡೆಯದೆ ಕರ್ಕಶವಾಗಿ ಡಿಜೆ ಸೌಂಡ್ ಹಾಕಿದ್ದ ಮನೆಗೆ ಪೊಲೀಸ್ ದಾಳಿ ನಡೆಸಿದ್ದಾರೆ.

ಅಂಬಲಪಾಡಿಯ ಗ್ರಾಮದ ಪ್ರಜ್ವಲ್ ನಗರದ ಪಲ್ಲಕ್ಕಿ ರೈಸ್ ಮಿಲ್ ಪರಿಸರದ ಮನೆಯಲ್ಲಿ ಡಿಜೆ ಮ್ಯೂಸಿಕ್ ಹಾಕಿ ಸಾರ್ವಜನಿಕರಿಗೆ ತಡರಾತ್ರಿವರೆಗೆ ಸಮಸ್ಯೆಯಾಗಿದ್ದ ಬಗ್ಗೆ ಮಾಹಿತಿ ಪಡೆದ ನಗರ‌ಠಾಣಾ ಸಬ್‌ ಇನ್ಸ್ಪೆಕರ್ ತಾರನಾಥ್‌ ಅವರು ದಾಳಿ ನಡೆಸಿದ್ದಾರೆ.

ಡಿಜೆ ಸೌಂಡ್‌ನ್ನು ಪ್ರಿತೇಶ್ ಇವರು ಯಾವುದೇ ಪೂರ್ವಾನುಮತಿ ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಉಪಯೋಗಿಸಿದ ಡಿ.ಜೆ./ಧ್ವನಿವರ್ಧಕದ ಮಾಲೀಕರಾದ ಶರತ್ ಹಾಗೂ ಲೈಟ್ಸ್-ಸೌಂಡ್ಸ್ ನ ಸಿಬ್ಬಂದಿಗಳಾದ ದಿಲೀಪ್, ರಂಜಿತ್ ಮತ್ತು ಯತೀನ್ ಪೂಜಾರಿ ಇವರು ಪರವಾನಿಗೆಯಿಲ್ಲದೇ ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸ್ವೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 194/2023 ಕಲಂ: 109 KP Act ಮತ್ತು 290 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!