ಬಡವರ, ರೈತರ, ಕಾರ್ಮಿಕರ ಕಾಳಜಿ ಇದ್ದರೇ ಬೆಲೆ ಏರಿಕೆ ನಿಲ್ಲಿಸಿ- ಸುರೇಶ್ ಶೆಟ್ಟಿ

ಉಡುಪಿ: ತಾವು ಅಧಿಕಾರದಲ್ಲಿ ಇದ್ದೇವೆ ಬಹುಮತ ತಮ್ಮದಾಗಿದೆ ಎಂದು ಅಹಂಕಾರದಿಂದ ವರ್ತಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂಸತ್ತಿನಲ್ಲಿ ನಡೆದ ಕೃತ್ಯದ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಉತ್ತರಿಸಲಾಗದೆ ಹೆದರಿ ಲೋಕಸಭೆ ಹಾಗೂ ರಾಜ್ಯಸಭೆಯ 146 ಸದಸ್ಯರನ್ನು ಅಮಾನತುಗೊಳಿಸಿದ್ದು ಖಂಡನೀಯ.

ನಮ್ಮ ಭಾರತ ದೇಶದ ಜನರಿಗೆ ದಿನಕ್ಕೊಂದು ಸುಳ್ಳು ಹೇಳಿ ದಿನಕ್ಕೊಂದು ಕಾನೂನನ್ನು ಜಾರಿಗೆ ತಂದು ದೇಶದ ಸಂವಿಧಾನವನ್ನೇ ಮೂಲೆಗುಂಪು ಮಾಡಲು ಹೊರಟಿರುವ ಕೇಂದ್ರದ ಈ ಬಿಜೆಪಿ ಸರಕಾರ ಹಾಗೂ ಮೋದಿ ಹಾಗೂ ಅಮಿತ್ ಶಾ ರವರ ಕೆಟ್ಟ ನೀತಿಯಿಂ ದಾಗಿ ದೇಶದ ಜನರು ಸಂಕಷ್ಟ ಪಡುವಂತಾಗಿದೆ.

ನಮ್ಮ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಇವರು ಮಧ್ಯ ಪ್ರವೇಶಿಸಿ ವಿರೋಧ ಪಕ್ಷದಗಳ ಸಂಸತ್ ಸದಸ್ಯರ ಅಮಾನತನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನು ನೀಡಿ ಕೇಂದ್ರ ಸರಕಾರದ ಚಳಿಗಾಲದ ಅಧಿವೇಶನವನ್ನು ವಿರೋಧ ಪಕ್ಷಗಳ ಜೊತೆ ಚರ್ಚೆಯನ್ನು ಮಾಡಿ ಸುಲಲಿತ ರೀತಿಯಲ್ಲಿ ಮುಕ್ತಾಯ ಗೊಳಿಸಬೇಕಾಗಿದೆ. ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ನಮ್ಮ ದೇಶದ ಜನರು ಕಂಗಾಲಾಗಿದ್ದಾರೆ.

ದೇಶದ ಬಡ ಜನರಿಗೆ ಈ ಬೆಲೆ ಏರಿಕೆ ನೀತಿಯಿಂದಾಗಿ ದಿನದ ಒಂದು ಹೊತ್ತು ಊಟವನ್ನು ಮಾಡಲು ಆಗದಂತ ಪರಿಸ್ಥಿತಿ ಇದೆ ಬಿಜೆಪಿ ನಾಯಕರು ಹಾಗೂ ಮೋದಿಯವರು ಶ್ರೀಮಂತರ ಓಲೈಕೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ನಿಮಗೆ ನಿಜವಾಗಿ ಬಡವರ ಬಗ್ಗೆ, ರೈತರ, ಮಧ್ಯಮ ವರ್ಗದವರ ಬಗ್ಗೆ ಕೂಲಿ ಕಾರ್ಮಿಕರಬಗ್ಗೆ ಕಾಳಜಿ ಇದ್ದರೇ ಬೆಲೆ ಏರಿಕೆಯನ್ನು ಕಡಿಮೆಗೊಳಿಸಿ. ಸಂಸತ್ತಿನೊಳಗೆ ಅಕ್ರಮವಾಗಿ ಪ್ರವೇಶಿಸಲು ಪಾಸ್ ನೀಡಿದಂತಹ ಬಿಜೆಪಿಯ ಸಂಸತ್ ಸದಸ್ಯ ಪ್ರತಾಪ್ ಸಿಂಹರವರ ಸದಸ್ಯತ್ವವನ್ನು ಈ ಕೂಡಲೇ ರದ್ದುಪಡಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿದಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!