ನಿಟ್ಟೆ: ಸುಷ್ಮಾ ಪಿ.ಎಸ್ ಅವರಿಗೆ ಡಾಕ್ಟರೇಟ್
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಸುಷ್ಮಾ ಪಿ.ಎಸ್ ಅವರು ‘ಡೆವಲಪ್ಮೆಂಟ್ ಆಂಡ್ ವೇರಿಫಿಕೇಶನ್ ಆಫ್ ಲೋ ಪವರ್ ಅನಲಾಗ್ ಫ್ರಂಟ್ ಎಂಡ್ ಸಿಮೊಸ್ ಸರ್ಕ್ಯೂಟ್ಸ್ ಫಾರ್ ಬಯೋಮೆಡಿಕಲ್ ಎಪ್ಲಿಕೇಶನ್ಸ್’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಭಂದಕ್ಕೆ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ.
ಅವರು ರೇವಾ ಯುನಿವರ್ಸಿಟಿಯ ಮಾಜಿ ಉಪಕುಲಪತಿ ಹಾಗೂ ಪ್ರಸ್ತುತ ಬಿ.ಎನ್.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ಎಸ್.ವೈ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದರು. ಡಾ. ಸುಷ್ಮಾ ಅವರು ನಿವೃತ್ತ ಉಪ ತಹಶೀಲ್ದಾರ್ ಪಿ. ಗಣೇಶ ಆಚಾರ್ಯ ಮತ್ತು ಜಯಂತಿ ಇವರ ಪುತ್ರಿ ಹಾಗೂ ಪಣಂಬೂರಿನ ಎಂ.ಸಿ.ಎಫ್ ಸಂಸ್ಥೆಯ ಉದ್ಯೋಗಿ ಶಿವಪ್ರಸಾದ್ ಎಂ. ವಿ. ಇವರ ಧರ್ಮಪತ್ನಿ.