ಬಡ, ಮಧ್ಯಮ ವರ್ಗದ ಜನರನ್ನು ಬೀದಿಗೆ ನಿಲ್ಲಿಸುವುದೆಂದರೆ ಸರ್ಕಾರಕ್ಕೆ ಅದೇನೋ ಖುಷಿಯೋ….
ಅಂದು ನೋಟು ಬ್ಯಾನ್… ಬಳಿಕ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್…, ಆಯುಷ್ಮಾನ್ ಯೋಜನೆಗೆ ಜನರನ್ನು ಬಿಸಿಲಿನಲ್ಲಿ ನಿಲ್ಲಿಸಿದ ಕೇಂದ್ರ ಸರಕಾರವು ಈಗ ಹಲವು ವರ್ಷಗಳಿಂದ ಸ್ಥಗಿತಗೊಳಿಸಿದ ಗ್ಯಾಸ್ ಸಬ್ಸಿಡಿ ನೀಡುಲಾಗುವುದೆಂದು ಹೇಳಿ ಮತ್ತೆ ಜನರನ್ನು ಗ್ಯಾಸ್ ಎಜೆನ್ಸಿಗಳ ಮುಂದೆ ಬಿಸಿಲಿನಲ್ಲಿ ಗಂಟೆಗಂಟ್ಟಲೆ ಬೀದಿಬದಿ ನಿಲ್ಲಿಸುವಂತೆ ಮಾಡಿದೆ.
ಪ್ರಸ್ತುತ ಹೆಚ್ಚಿನ ಪಡಿತರ ಚೀಟಿ, ಆಧಾರ್, ಪ್ಯಾನ್ ಕಾರ್ಡ್ಗಳಿಗೆ ಲಿಂಕ್ ಆಗಿದ್ದರೂ ಮತ್ತೆ ಮತ್ತೆ ಜನರಿಗೆ ಕಿರುಕುಳ ನೀಡುವ ಸರಕಾರದ ಡಿಜಿಟಲೀಕರಣದ ಹೇಳಿಕೆಗಳಿಗೆ ಏನು ಅರ್ಥ ಇದೆ ಎನ್ನುತ್ತಾರೆ ಸಾಮಾನ್ಯ ಜನರು. ದಿನವಿಡೀ ಜನರನ್ನು ಇಂತಹ ಯೋಜನೆಗಳಿಗೆ ಸರಕಾರಿ ಕಚೇರಿಗಳಲ್ಲಿ ನಿಲ್ಲಿಸಿ ಕೊನೆ ಸರ್ವರ್ ಸಮಸ್ಯೆ ಇದೆ ಎಂದು ಹಿಂದಕ್ಕೆ ಕಳುಹಿಸಿ ನಾಳೆ ಬನ್ನಿ ಹೇಳಿದ ಪ್ರಸಂಗವೂ ಇದೆ
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶವೊಂದು ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿವೆ. ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.