ಹುಟ್ಟುಹಬ್ಬ ಆಚರಣೆಗೆ ಹಣ ಕೊಡದಕ್ಕೆ ಮನೆ ಬಿಟ್ಟು ಹೋದ ವಿದ್ಯಾರ್ಥಿ!
ಅಮಾಸೆಬೈಲು: ಹುಟ್ಟುಹಬ್ಬ ಆಚರಣೆಗೆ ಹಣ ಕೊಡದ ಕಾರಣಕ್ಕಾಗಿ ವಿದ್ಯಾರ್ಥಿಯೋರ್ವ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿರುವ ಘಟನೆ ಡಿ.15ರ ಬೆಳಗ್ಗೆ ನಡೆದಿದೆ.
ನಾಪತ್ತೆಯಾದವರನ್ನು ಹೊಸಂಗಡಿ ಗ್ರಾಮದ ಗುರುದಾಸ್ ಎಂಬವರ ಮಗ ಅಭಿಷೇಕ(20) ಎಂದು ಗುರುತಿಸಲಾಗಿದೆ. ಮಣಿಪಾಲ ಟಿಎಂಎ ಪೈ ಕಾಲೇಜಿ ನಲ್ಲಿ ಡಿಪ್ಲಮೋ ಓದುತ್ತಿದ್ದ ಅಭಿಷೇಕ್, ಡಿ.15ರಂದು ಕಾಲೇಜಿಗೆ ರಜೆ ಹಾಕಿದ್ದನು. ಡಿ.16ರಂದು ಹುಟ್ಟುಹಬ್ಬ ಇರುವುದರಿಂದ ಹಣ ಕೊಡುವಂತೆ ತಂದೆಯ ಬಳಿ ಕೇಳಿದ್ದನು.
ಆದರೆ ತಂದೆ, ಮನೆಯಲ್ಲೇ ಹುಟ್ಟುಹಬ್ಬ ಆಚರಿಸುವುದಾರೆ ಹಣ ಕೊಡುವುದಾಗಿ ಹೇಳಿದ್ದರು. ಇದೇ ವಿಚಾರದಲ್ಲಿ ಆತ ಮನೆಯಿಂದ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.