ಬ್ರಹ್ಮಾವರ/ಕೋಟ: ಪ್ರತ್ಯೇಕ ಪ್ರಕರಣ- ಇಬ್ಬರು ನೇಣಿಗೆ ಶರಣು

ಬ್ರಹ್ಮಾವರ, ಡಿ.19: ಬಾರಕೂರಿನಲ್ಲಿ ಫ್ಯಾನ್ಸಿ ಸ್ಟೋರ್ಸ್‌ ನಡೆಸಿಕೊಂಡಿಕೊಂಡಿದ್ದ ಹೇರಾಡಿ ಎಸ್‌ವಿವಿಎನ್ ಆಂಗ್ಲ ಮಾಧ್ಯಮ ಶಾಲೆಯ ಸಮೀಪದ ನಿವಾಸಿ ಪ್ರವೀಣ್ ಕುಮಾರ(47) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಡಿ.19ರಂದು ಬೆಳಗ್ಗೆ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಕಡ ನಿವಾಸಿ ಶ್ರೀನಿವಾಸ(64) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸವಾಗಿರುವ ಚಿತ್ರಪಾಡಿಯ ಕಮಲಮ್ಮ ಕಾಂಪ್ಲೆಕ್ಷನಲ್ಲಿ ಡಿ.16ರ ಬೆಳಗ್ಗೆಯಿಂದ ಡಿ.18ರ ಮಧ್ಯಾವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!