ಲೋಕದ ಹಲವು ಸವಾಲುಗಳನ್ನು ಎದುರಿಸಲು ಸಂಶೋಧನೆ ಎಂಬ ಅಸ್ತ್ರ ಅಗತ್ಯ: ಡಾ. ಶ್ರೀಪಾದ್ ಟಿ ರೇವಣ್ಕರ್ ಅಭಿಪ್ರಾಯ
ಕಾರ್ಕಳ: ‘ಭಾರತ ದೇಶವು ಬಹಳಷ್ಟು ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದು ಉತ್ತಮ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತ ದೇಶವು ಸಂಶೋಧನೆಯ ಮೂಲಕ ಕೋವಿಡ್ ಎಂಬ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ ಇಲ್ಲಿ ತಯಾರಾದ ಲಸಿಕೆಯನ್ನು ಹೊರದೇಶಗಳಿಗೂ ನೀಡುವ ಮೂಲಕ ವಿವಿಧ ರಾಷ್ಟ್ರಗಳಿಗೆ ಇಂತಹ ಸವಾಲನ್ನು ಎದುರಿಸುವಲ್ಲಿ ಸಹಾಯ ಮಾಡಿದೆ.2047 ಕ್ಕೆ ಭಾರತ ದೇಶದ ಸ್ವಾತಂತ್ರದ ಶತಕದ ಸಂಭ್ರಮದಕ್ಕೆ ಭಾರತವು ಒಂದು ಅಭಿವೃದ್ದಿ ಹೊಂದಿದ ದೇಶಗಳ ಪಟ್ಟಿಯನ್ನು ಸೇರುವುದು ಖಚಿತ’ ಎಂದು ಅಮೆರಿಕದ ಪರ್ಡು ವಿಶ್ವವಿದ್ಯಾಲಯದ ಮಲ್ಟಿಫೇಸ್ &ಫ್ಯೂಯೆಲ್ ಸೆಲ್ ರಿಸರ್ಚ್ ಲ್ಯಾಬ್ಸ್ ನ ನಿರ್ದೇಶಕ ಪ್ರೊ. ಡಾ. ಶ್ರೀಪಾದ್ ಟಿ.ರೆವಣ್ಕರ್ ಅಭಿಪ್ರಾಯಪಟ್ಟರು.
ಅವರು ಎರಡು ದಿನಗಳ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿರುವ ಎರಡು ದಿನಗಳ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್” ಅಂತಾರಾಷ್ಟ್ರೀಯ ಮಟ್ಟದ ಮಲ್ಟಿ ಕಾನ್ಫರೆನ್ಸ್ ‘ಐ.ಸಿ.ಇ.ಟಿ.ಇ-2023’ನ್ನು ಉದ್ಘಾಟಿಸಿ ಮಾತನಾಡಿದರು.
‘ಸಂಶೋಧನೆ ಹಾಗೂ ಇನ್ನೋವೇಟಿವ್ ಐಡಿಯಾಗಳು ಇನ್ನಷ್ಟು ಬೆಳೆಯಬೇಕಿದೆ. ಸಮಾಜದ ವಿವಿಧ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳ ಬೆಳವಣಿಗೆ ಅಗತ್ಯ. ಈ ದೃಷ್ಟಿಯಿಂದ ನಿಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿರುವ ಐ.ಸಿ.ಇ.ಟಿ.ಇ ಯಂತಹ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಮುಖ್ಯ ಪಾತ್ರ ವಹಿಸುತ್ತವೆ’ ಎಂದರು.
ಗೌರವ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಟೆಕ್ನಿಕಲ್ ಎಜುಕೇಶನ್ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಆಟೋಲಿವ್ ಸಂಸ್ಥೆಯ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಕಿರಣ್ ಶೀಲಾವಂತ್, ಎಲ್&ಟಿ ಸಂಸ್ಥೆಯ ಸಲಹೆಗಾರ ನಿರಂಜನ್ ಸಿಂಹ ಮತ್ತು ಜಪಾನ್ ನ ನಿಡೆಕ್ ಸಂಸ್ಥೆಯ ಜನರಲ್ ಮ್ಯಾನೇಜರ್ ತಕಶಿ ಮಿಯಸಕ ಮಾತನಾಡಿ ಸಂಶೋಧನಾ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾನ್ಫರೆನ್ಸ್ ಪ್ರೊಸೀಡಿಂಗ್ಸ್ ಪುಸ್ತಕವನ್ನು ಡಾ. ಶ್ರೀಪಾದ್ ಟಿ ರೇವಣ್ಕರ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್ ವಿನಯ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ‘ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಾಣಲು ಇಂತಹ ವಿಜ್ಞಾನ ಸಮ್ಮೇಳನಗಳು ಒಂದು ವೇದಿಕೆಯಾಗಲಿದೆ. ಸಂಶೋಧನೆಯೊಂದಿಗೆ ಪರಿಸರ ಸಂರಕ್ಷಣೆಯ ಬಗೆಗೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಹೆಚ್ಚಿನ ಒತ್ತು ನೀಡಬೇಕಿದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕಿರುವ ಬೇಡಿಕೆ ಅಪಾರ. ಅದರೊಂದಿಗೆ ಅಂತರ್ವಿಭಾಗೀಯ ಬೋಧನೆ, ಸಂಶೋಧನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಎಲ್ಲಾ ಕ್ಷೇತ್ರಗಳನ್ನೂ ಬೆಳೆಸುವುದು ನಮ್ಮ ಗುರಿಯಾಗಬೇಕು’ ಎಂದು ಅವರು ಹೇಳಿದರು.
‘ಐ.ಸಿ.ಇ.ಟಿ.ಇ-2023’ ಮಲ್ಟಿ ಕಾನ್ಫರೆನ್ಸ್ ನ ಅಡಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ನರ್ಚರಿಂಗ್ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್- ಬಯೋಸೈನ್ಸ್’ ಎಂಬ ಕಾನ್ಫರೆನ್ಸನ್ನು ಹಮ್ಮಿಕೊಳ್ಳಲಾಗಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸಿವಿಲ್ ಇಂಜಿನಿಯರಿಂಗ್ ಟ್ರೆಂಡ್ಸ್ ಆ್ಯಂಡ್ ಚ್ಯಾಲೆಂಜಸ್ ಫಾರ್ ಸಸ್ಟೈನೆಬಿಲಿಟಿ’ ಎಂಬ ಕಾನ್ಫರೆನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಇನ್ಫೋರ್ಮೇಶನ್ ಸೈನ್, ಎಂ.ಸಿ.ಎ ವಿಭಾಗಗಳ ಜಂಟಿ ಆಶ್ರಯದಲ್ಲಿ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾ ಇಂಜಿನಿಯರಿಂಗ್’, ಎಲೆಕ್ಟ್ರಿಕಲ್ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಎಡ್ವಾನ್ಸಸ್ ಇನ್ ರಿನೀವೇಬಲ್ ಎನರ್ಜಿ & ಇಲೆಕ್ಟ್ರಿಕ್ ವೆಹಿಕಲ್, ಇಲೆಕ್ಟ್ರಾನಿಕ್ಸ್ ವಿಭಾಗದ ‘ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಆನ್ ವಿ.ಎಲ್.ಎಸ್.ಐ, ಸಿಗ್ನಲ್ ಪ್ರೊಸೆಸಿಂಗ್, ಪವರ್ ಎಲೆಕ್ಟ್ರಾನಿಕ್ಸ್, ಐಒಟಿ, ಕಮ್ಯೂನಿಕೇಶನ್ & ಎಂಬೆಡೆಡ್ ಸಿಸ್ಟಮ್ಸ್’, ಮೆಕ್ಯಾನಿಕಲ್ ಹಾಗೂ ರೋಬೋಟಿಕ್ಸ್ ವಿಭಾಗದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಮಾರ್ಟ್ ಆ್ಯಂಡ್ ಸಸ್ಟೈನೇಬಲ್ ಡೆವಲಪ್ಮೆಂಟ್ಸ್ ಇನ್ ಮೆಟೀರಿಯಲ್ಸ್, ಮ್ಯಾನುಫ್ಯಾಕ್ಚರಿಂಗ್ ಆಂಡ್ ಎನರ್ಜಿ ಇಂಜಿನಿಯರಿಂಗ್’ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗದ ವತಿಯಿಂದ ‘ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಮೆಟೀರಿಯಲ್ಸ್ ಸೈನ್ಸ್ ಆಂಡ್ ಮ್ಯಾತಮೆಟಿಕ್ಸ್ ಫಾರ್ ಎಡ್ವಾನ್ಸ್ಡ್ ಟೆಕ್ನಾಲಜಿ’ ಎಂಬ ವಿವಿಧ ವಿಷಯಗಳ ಬಗೆಗೆ ಒಟ್ಟು7ಕಾನ್ಫರೆನ್ಸ್ ಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಎರಡು ದಿನಗಳ ಕಾನ್ಫರೆನ್ಸ್ ನ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿವಿಧ ವಿಭಾಗಗಳ 15 ಸಾಧಕರು ದಿಕ್ಸೂಚಿ ಭಾಷಣಗಳನ್ನು ನಡೆಸಲಿರುವರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧಕರಿಂದ 650 ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಬಂದಿದ್ದು ತಜ್ಞರ ಪರಿಶೀಲನೆಯ ಬಳಿಕ 260 ಪ್ರಬಂಧಗಳನ್ನು ಮಂಡನೆಗಾಗಿ ಆಹ್ವಾನಿಸಲಾಗಿದೆ.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಕಾನ್ಫರೆನ್ಸ್ ನ ಮುಖ್ಯಸಂಯೋಜಕ ಹಾಗೂ ರಿಸರ್ಚ್ ವಿಭಾಗದ ಡೀನ್ ಡಾ| ಸುದೇಶ್ ಬೇಕಲ್ ಕಾನ್ಫರೆನ್ಸ್ ಬಗೆಗೆ ಸಮಗ್ರ ವಿವಿರ ನೀಡಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ದಿವಿಜೇಶ್ ಪ್ರಾರ್ಥಿಸಿದರು. ಕಾನ್ಫರೆನ್ಸ್ ಕಾರ್ಯದರ್ಶಿ ಡಾ| ರಘುನಂದನ್ ಕೆ.ಆರ್ ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂಯೋಜಕಿ ಡಾ.ಹರ್ಷಿತಾ ಎಂ ಜತ್ತಣ್ಣ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ಶಶಾಂಕ್ ಶೆಟ್ಟಿ ಹಾಗೂ ಮಾನವಿಕ ವಿಭಾಗದ ಸಹಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.