ಉದ್ಯಾವರ: ಡಿ.23 ಸಂಪೂರ್ಣ ಹವಾ ನಿಯಂತ್ರಿತ ಕ್ಸೇವಿಯರ್ ಸಭಾಭವನ ಲೋಕಾರ್ಪಣೆ

ಉದ್ಯಾವರ : ಇಲ್ಲಿಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವ್ಯಾಪ್ತಿಯಲ್ಲಿರುವ ಸಭಾಭವನವನ್ನು ನವೀಕೃತಗೊಳಿಸಲಾಗಿದ್ದು, ಪ್ರಸ್ತುತ 800 ಅಸನಗಳುಳ್ಳ ಆಧುನಿಕ ಸೌಕರ್ಯಗಳ ಸುಸಜ್ಜಿತ ಸಭಾಭವನವು ಸಂಪೂರ್ಣ ಹವಾ ನಿಯಂತ್ರಿತದೊಂದಿಗೆ ಡಿಸೆಂಬರ್ 23ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂ. ಫಾ. ಸ್ಟ್ಯಾನಿ ಬಿ ಲೋಬೊ ತಿಳಿಸಿದ್ದಾರೆ.

ಸಂಜೆ 4.30ಕ್ಕೆ ಕೃತಜ್ಞತಾ ಬಲಿ ಪೂಜೆ ನಡೆಯಲಿದ್ದು, 6 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಭಾಗವಹಿಸಲಿದ್ದು, ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ಮಾಂಡವಿ ಬಿಲ್ಡರ್ಸ್ ಪ್ರವರ್ತಕರರಾದ ಡಾ. ಜೆರ್ರಿ ವಿನ್ಸೆಂಟ್ ಡಯಾಸ್, ಹಲಿಮಾ ಸಾಬ್ಜು ಸಭಾಭವನದ ಮಾಲಕರಾದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಮತ್ತು ದಾನಿ ನೋರ್ಬರ್ಟ್ ಕ್ರಾಸ್ಟೊ ಪಿತ್ರೋಡಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಇರುವಂತಹ ಈ ಸಭಾಭವನವು ಗ್ರಾಹಕರಿಗೆ ತಕ್ಕಂತೆ ಆಧುನಿಕ ಸೌಕರ್ಯಗಳೊಂದಿಗೆ ನವೀಕೃತಗೊಂಡಿದ್ದು ಸಾರ್ವಜನಿಕರ ಕಾರ್ಯಕ್ರಮಗಳಿಗೆ ಲಭ್ಯವಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿರುವ ಈ ಸಭಾಭವನದಲ್ಲಿ Non-ಎಸಿಯು ಲಭ್ಯವಿದೆ. ಏಕಕಾಲದಲ್ಲಿ 800 ಮಂದಿ ಕುಳಿತುಕೊಳ್ಳುವ ಸುಸಜ್ಜಿತ ಸಭಾಭವನವು ಇದಾಗಿದ್ದು, ಸ್ವಚ್ಛ ಮತ್ತು ವಿಶಾಲವಾದ ಶೌಚಾಲಯಗಳು ಹಾಗೂ ವಾಹನ ನಿಲುಗಡೆಗೂ ವ್ಯವಸ್ಥಿತವಾಗಿರುವ ಸ್ಥಳಾವಕಾಶವಿದೆ. ಜೊತೆಗೆ 200 ಅಸನಗಳುಳ್ಳ ಮಿನಿ ಹಾಲ್ ಹಾಗೂ ವಿಸ್ತಾರವಾದ ಬಯಲು ರಂಗ ಮಂದಿರವು ಸಮಾರಂಭಗಳಿಗೆ ಲಭ್ಯವಿದೆ ಎಂದು ಫಾ. ಸ್ಟ್ಯಾನಿ ಬಿ ಲೋಬೊ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!