ಮಣಿಪಾಲ ಕಂಟ್ರಿ ಇನ್ ಹೊಟೇಲಿನಲ್ಲಿ ಕಣ್ಮನ ಸೆಳೆಯುವ ಕ್ರಿಸ್ಮಸ್ ಟ್ರೀ, ಗೋದಲಿ
ಮಣಿಪಾಲ: ಪ್ರತಿಷ್ಠಿತ ಸ್ಟಾರ್ ಹೊಟೇಲ್ಗಳಲ್ಲಿ ಒಂದಾದ ಕಂಟ್ರಿಇನ್ & ಸೂಟ್ಸ್ನಲ್ಲಿ ಕ್ರಿಸ್ಮಸ್ ಹಬ್ಬದ ಪೂರ್ವಭಾವಿಯಾಗಿ ಕ್ರಿಸ್ಮಸ್ ಟ್ರಿ ಹಾಗೂ ಗೋದಲಿಯನ್ನು ರಚಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಕ್ರಿಸ್ಮಸ್ ಟ್ರೀಗೆ ಗಿಫ್ಟ್ ಬಾಕ್ಸ್ಗಳನ್ನು ಗ್ರಾಹಕರಿಂದ ಅಳವಡಿಸಲಾಯಿತು. ಇದೇ ಸಂದರ್ಭದಲ್ಲಿ ಕ್ರಿಸ್ಮಸ್ ಗೀತೆಗಳನ್ನು ಹಾಡಲಾಯಿತು. ಸಾಂತಾಕ್ಲಾಸ್ ಮಕ್ಕಳನ್ನು ರಂಜಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಆನಂದ್, ಚಂದ್ರಕಲಾ, ವಿಜಯಲಕ್ಷ್ಮಿ ಹಾಗೂ ಹೊಟೇಲ್ನ ಜನರಲ್ ಮ್ಯಾನೇಜರ್ ತರುಣ್ ಸಿಂಗ್ ಉಪಸ್ಥಿತರಿದ್ದರು.