ಉಡುಪಿ: ಎಸ್.ಬಿ.ಐ. ಎಂಟಿಎಂ ಯಂತ್ರ ಕಳವಿಗೆ ಯತ್ನ
ಉಡುಪಿ, ಡಿ.18: ಆದಿ ಉಡುಪಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಯಂತ್ರವನ್ನು ಹಾನಿಗೈದು ಕಳವಿಗೆ ಯತ್ನಿಸಿರುವ ಘಟನೆ ಡಿ.16 ರಂದು ಮಧ್ಯರಾತ್ರಿ ವೇಳೆ ನಡೆದಿದೆ.
ಆದಿ ಉಡುಪಿಯ ಆದಾಯ ತೆರಿಗೆ ಕಛೇರಿಯ ಎದುರು ಇರುವ ಎಸ್‌ಬಿಐನ ಎಟಿಎಂಗೆ ನುಗ್ಗಿದ ಕಳ್ಳರು, ಎಟಿಎಂ ಯಂತ್ರ ವನ್ನು ಹಾನಿ ಮಾಡಿ ಕಳ್ಳತನಕ್ಕೆ ಪ್ರಯತ್ನಪಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.