ಕುಂದಾಪುರ: ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ- ವಾರ್ಷಿಕ ಕ್ರೀಡಾ ದಿನ
ಕುಂದಾಪುರ: ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿ ಶಾಲೆಯ ವಾರ್ಷಿಕ ಕ್ರೀಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಡಾ.ಸೋನಿ ಡಿ’ಕೋಸ್ಟ ಅಧ್ಯಕ್ಷರು, ಜೆಸಿಐ ಕುಂದಾಪುರ ಘಟಕ ಇವರು ಉದ್ಘಾಟಿಸಿ, ಮಕ್ಕಳ ಪೋಷಕರನ್ನು ಉದ್ದೇಶಿಸಿ “ಮಕ್ಕಳಲ್ಲಿ, ದೇವರಲ್ಲಿ ಶ್ರದ್ಧೆಯಿರಬೇಕು ಹಾಗೂ ಮಕ್ಕಳ ಪ್ರತಿಯೊಂದು ವಿಷಯದಲ್ಲಿಯೂ ಶಿಸ್ತು ಬೆಳೆಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಮಗುವು ಭಗವಂತನ ಅಮೂಲ್ಯ ಸೃಷ್ಟಿ. ನಿಮ್ಮ ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸಬೇಡಿ” ಎಂದರು.
ಮಕ್ಕಳ ಪಥಸಂಚಲ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪೋಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸಿದ್ದಾರ್ಥ್ ಜೆ.ಶೆಟ್ಟಿ, ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ.ರಾಮಕೃಷ್ಣ ಹೆಗಡೆ, ಶಾಲೆಯ ಆಡಳಿತ ಮುಖ್ಯಸ್ಥರಾದ ಪ್ರೊ. ಪಾವನ, ದೈಹಿಕ ಶಿಕ್ಷಕರಾದ ಪ್ರವೀಣ್ ಖಾರ್ವಿ, ಐಎಂಜೆಐಎಸ್‌ಸಿ ಉಪಪ್ರಾಂಶುಪಾಲರಾದ ಪ್ರೊ. ಜಯಶೀಲ ಕುಮಾರ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯಾರಾದ ರಶ್ಮಾ ಶೆಟ್ಟಿಯವರು ನಿರೂಪಿಸಿದರು. ಸಂಗೀತ ಮೇಸ್ತಾ ಸ್ವಾಗತಿಸಿದರು. ಸೋಫಿಯಾ ಕರ್ವಾಲೋ ವಂದಿಸಿದರು.