ಕೊರೋನಾ ವೈರಸ್ ನಮ್ಮ ಚರ್ಮದ ಮೇಲೆ ಎಷ್ಟು ಗಂಟೆಗಳ ಕಾಲ ಇರುತ್ತೆ ಗೊತ್ತಾ?
ನವದೆಹಲಿ: ಕೊರೋನಾ ವೈರಸ್ ಏನಾದರೂ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದಂತೆ. ಕೋವಿಡ್ -19 ಗೆ ಕಾರಣವಾಗುವ SARS-CoV-2ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು , ಪ್ಲೋ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.
ಇದಕ್ಕೆ ವಿರುದ್ಧವಾಗಿ ಇನ್ ಪ್ಲೂಯೆಂಜಾ ಎ ವೈರಸ್ ಮನುಷ್ಯನ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರಲಿದೆ ಎಂದು ಜಪಾನ್ ನ ಕ್ಯೋಟೋ ಫ್ರಿಪೆಕ್ಟರಲ್ ಯೂನಿರ್ವಸಿಟಿ ಆಫ್ ಮೆಡಿಸನ್ ಸಂಶೋಧಕರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ಎರಡು ವೈರಸ್ ಗಳನ್ನು ವೇಗವಾಗಿ ನಿಷ್ಕ್ರೀಯಗೊಳಿಸಬಹುದು ಎಂಬುದು ಕಂಡುಬಂದಿದೆ.ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.
ಸ್ಟೇನ್‌ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್‌ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2 ಮತ್ತು ಐಎವಿ ವೈರಸ್ ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.