ಶಿರ್ವ: ಅಪರಿಚಿತ ವಾಹನ ಡಿಕ್ಕಿ- ಐವನ್ ಕೋರ್ಡಾ ಮೃತ್ಯು

ಶಿರ್ವ, ಡಿ.15: ಶಿರ್ವದ ಇಗರ್ಜಿಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ಐವನ್ ಕೋರ್ಡಾ (55) ಎಂದು ಗುರುತಿಸಲಾಗಿದೆ. ಇವರು ಚರ್ಚ್ ಕಾರ್ಯಕ್ರಮ ಮುಗಿಸಿ ಬೆಳಗಿನ ಜಾವ 12:30ರ ಸುಮಾರಿಗೆ ಶಿರ್ವ- ಬೆಳ್ಮಣ್ ರಸ್ತೆಯ ಹೊಂಡಾ ಶೋರೂಮ್ ಎದುರು ನಡೆದುಕೊಂಡು ಹೋಗುತಿದ್ದಾಗ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿತ್ತು.

ವಿಷಯ ತಿಳಿದ ಪರಿಚಯದ ಲ್ಯಾನ್ಸಿ ಎಂಬವರು 108 ಅಂಬುಲೆನ್ಸ್ ವಾಹನದಲ್ಲಿ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಐವನ್ ಕೋರ್ಡಾ ಮೃತಪಟ್ಟಿರುವುದಾಗಿ ತಿಳಿಸಿದರು.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!