ವೈಫ್ ಸ್ವಾಪಿಂಗ್​ಗೆ ಒತ್ತಾಯ, ಸಹೋದ್ಯೋಗಿ ಜೊತೆ ಮಲಗುವಂತೆ ಕಿರುಕುಳ: ಪತಿ ವಿರುದ್ಧ ಪತ್ನಿ ದೂರು!

ಬೆಂಗಳೂರು: ವೈಫ್ ಸ್ವಾಪಿಂಗ್​ಗೆ ಬಲವಂತ ಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಗಂಡ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಸಂತ್ರೆಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ತಡೆ ಕಾಯ್ದೆ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ಉದ್ಯೋಗಸ್ಥೆಯಾಗಿದ್ದು, ಬನಶಂಕರಿ 3ನೇ ಹಂತದ ನಿವಾಸಿಯಾಗಿದ್ದಾರೆ, ಆಕೆಯ ಪತಿ 30 ವರ್ಷದವನಾಗಿದ್ದು ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ, ಸುಂಕದಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವರ್ಷ ಡಿ. 5 ರಂದು ವಿವಾಹವಾಗಿದ್ದ ದೂರುದಾರರು, ಮದುವೆಗೆ ತನ್ನ ಕುಟುಂಬವು 30 ಲಕ್ಷ ರೂ. ಖರ್ಚು ಮಾಡಿದೆ ಎಂದು ಹೇಳಿಕೊಂಡಿದ್ದು, ಮದುವೆಯ ನಂತರ ಪತಿ ಮತ್ತು ಅತ್ತೆಯಂದಿರು 10 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಆಕೆಯ ಮನೆಯವರು 2 ಲಕ್ಷ ರೂ. ವ್ಯವಸ್ಥೆ ಮಾಡಿ ಪತಿಗೆ ನೀಡಿದರು.

23 ವರ್ಷದ ಸಂತ್ರಸ್ತೆ ಕಳೆದ ವರ್ಷ ಡಿಸೆಂಬರ್​ನಲ್ಲಿ‌‌ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಜೊತೆ ಮದುವೆಯಾಗಿ ದ್ದರು. ಹಿಂದೂ ಸಂಪ್ರದಾಯದಂತೆ ಗುರು – ಹಿರಿಯರ ಸಮ್ಮುಖದಲ್ಲಿ ಯುವತಿಯ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಮಾತುಕತೆಯಂತೆ 2 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನ ವರದಕ್ಷಿಣೆ ರೂಪವಾಗಿ ಕೊಟ್ಟಿದ್ದರು. ಮದುವೆ ಬಳಿಕ ಆರಂಭ ಎಲ್ಲವೂ ಸರಿಯಾಗಿತ್ತು. ಕಾಲ ಕ್ರಮೇಣ ನೀಡಲಾಗಿದ್ದ ಚಿನ್ನಾಭರಣದ ಗುಣಮಟ್ಟ ಸರಿಯಿಲ್ಲ ಎಂದು ಪತಿ ಮನೆಯವರು ಕ್ಯಾತೆ ತೆಗೆದು ಕಿರುಕುಳ ನೀಡಿದ್ದರು.

ವಿವಾಹಕ್ಕೂ ಪತಿ 10 ಲಕ್ಷ ಸಾಲ ಮಾಡಿದ್ದು, ಇದನ್ನು ತೀರಿಸಲು ಹಣ ತರುವಂತೆ ಹೆಂಡತಿಗೆ ಪೀಡಿಸಿದ್ದರು. ಹೀಗಾಗಿ 2 ಲಕ್ಷ ನೀಡಿದ್ದರೂ ಸಂತೃಪನಾಗದೇ ಕಿರುಕುಳ ನೀಡುವುದು ಮುಂದುವರೆಸಿದ್ದರು. ಈ ವೇಳೆ ಸಂಬಂಧಿಯೊಬ್ಬ ನನ್ನ ಕೈ- ಕಾಲನ್ನು ಅಸಹ್ಯವಾಗಿ ಮುಟ್ಟಿದ್ದ. ಅಲ್ಲದೇ ಪತಿ ವಿಡಿಯೋ ತೋರಿಸಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.

ಕೆಲಸ ಮಾಡುವ ಕಂಪನಿಯಲ್ಲಿ ವೈಫ್​ ಸ್ವಾಪಿಂಗ್ ಸಂಸ್ಕೃತಿ ಇದ್ದು, ತನ್ನ ಸ್ಮೇಹಿತರೊಂದಿಗೆ ಮಲಗುವಂತೆ ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಬೆಲ್ಟ್​​ನಿಂದ ಹೊಡೆದಿದ್ದಾನೆ. ಕಳೆದ ನ.31 ರಂದು ರಾತ್ರಿ ಮದ್ಯ ಸೇವನೆ ಮಾಡಿ ಬಂದು ಕೊಲೆ ಮಾಡುವ ಉದ್ದೇಶದಿಂದ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದನಲ್ಲದೇ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಿರುವ ಸಂತ್ರಸ್ತೆ, ಗಂಡನ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣವು ತನಿಖೆಯಲ್ಲಿದೆ. ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪತಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬೆಲ್ಟ್‌ನಿಂದ ಥಳಿಸಲಾಗಿದೆ ಎಂದು ದೂರುದಾರರು ಹೇಳಿಕೊಂಡಿರುವುದರಿಂದ ವೈದ್ಯಕೀಯ ದಾಖಲೆ ನೀಡುವಂತೆ ಕೇಳಿದ್ದೇವೆ. ದೂರುದಾರರು ಮಾಡಿರುವ ಆರೋಪಗಳು ನಿಜವೇ ಎಂಬುದನ್ನು ನಾವು ಇನ್ನೂ ಪರಿಶೀಲಿಸುತ್ತಿದ್ದೇವೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಕೆಯ ಪತಿ ಮತ್ತು ಇತರ ಒಂಬತ್ತು ಜನರ ವಿರುದ್ಧ ಕೊಲೆ ಯತ್ನ (ಐಪಿಸಿ 307), ಲೈಂಗಿಕ ಕಿರುಕುಳ (ಐಪಿಸಿ ಪ354 ಎ) ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!