ಪೆರಂಪಳ್ಳಿ ವಾರ್ಡಿನ ಉಪಚುನಾವಣೆ- ಕಾಂಗ್ರೆಸ್‌ನಿಂದ ಶ್ರುತಿ ನಾಮಪತ್ರ ಸಲ್ಲಿಕೆ
ಉಡುಪಿ: ಕಾಂಗ್ರೆಸ್‌ನ ಹಿರಿಯ ಸದಸ್ಯೆ, ಪೆರಂಪಳ್ಳಿ ವಾರ್ಡಿನ ನಗರ ಸಭಾ ಸದಸ್ಯೆ ಸೆಲಿನ ಕರ್ಕಡ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಡಿ.27ರಂದು ನಡೆಯಲಿದೆ.
ಈ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರುತಿ ಅವರು ಇಂದು ಉಡುಪಿ ನಗರಸಭೆಯಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಮುಖಂಡರಾದ ಎಂ ಎ ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುರಳಿ ಶೆಟ್ಟಿ, ಕುಶಲ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಹಬೀಬ್ ಆಲಿ, ಶಬ್ಬೀರ್, ಹರೀಶ್ ಶೆಟ್ಟಿ, ಗೀತಾ ವಾಗ್ಲೆ, ಮಮತಾ ಶೆಟ್ಟಿ, ಅಗ್ನೇಲ್, ರೋಶನ್ ಶೆಟ್ಟಿ, ಜೋಷಿ ಪಿಂಟೋ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪೆರಂಪಳ್ಳಿ ವಾರ್ಡಿನ ಮುಖಂಡರು ಹಾಗೂ ಕಾರ್ಯಕರ್ತರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪೆರಂಪಳ್ಳಿ ವಾರ್ಡಿನ ಉಪಚುನಾವಣೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಾಯಕರಾದ ರಮೇಶ್ ಪೂಜಾರಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಮ್ಯಾಕ್ಸಿಮ್ ಡಿಸೋಜಾ, ನಾಸಿರ್ ಯಾಕೂಬ್, ಮಾಧವ ಬನ್ನಂಜೆ, ಆನಂದ್ ಪೂಜಾರಿ, ಮಮತಾ ಶೆಟ್ಟಿ, ಹಾಗೂ ಡಿಯೋನ್ ಡಿಸೋಜಾ ಅವರು ಉಸ್ತುವಾರಿಗಳಾಗಿ ನೇಮಕಗೊಂಡಿದ್ದಾರೆ.