ಸುಶಾಂತ್ ಸಿಂಗ್ ಬಗ್ಗೆ ನಕಲಿ ಟ್ವೀಟ್‌ ಪ್ರಸಾರ: ಆಜ್’ತಕ್’ಗೆ 1ಲಕ್ಷ ರೂ. ದಂಡ

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ನಕಲಿ ಟ್ವೀಟ್‌ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್‌ಬಿಎಸ್‌ಎ) ಸುದ್ದಿ ವಾಹಿನಿ ಆಜ್ ತಕ್ ಗೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ.

 ಟಿವಿ ಪ್ರಸಾರದಲ್ಲಿ ನೈತಿಕತೆಯ ಉಲ್ಲಂಘನೆ ಮತ್ತು ಸತ್ತವರ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಚಾನೆಲ್‌ಗಳಲ್ಲಿ ಕ್ಷಮೆಯಾಚಿಸುವಂತೆ ಸುದ್ದಿ ಪ್ರಸಾರಕರಾದ ಆಜ್ ತಕ್ ಝೀ ನ್ಯೂಸ್ ಇಂಡಿಯಾ ಟಿವಿ ಮತ್ತು ನ್ಯೂಸ್ 24 ಗೆ ಪ್ರಾಧಿಕಾರವು  ನಿರ್ದೇಶನ ನೀಡಿತು.ಈ ಆದೇಶಕ್ಕೆ ಎನ್‌ಬಿಎಸ್‌ಎ ಅಧ್ಯಕ್ಷ ನಿವೃತ್ತ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಸಹು ಮಾಡಿದ್ದಾರೆ. ನಕಲಿ ಟ್ವಿಟ್ಟರ್ ಗಳನ್ನು  ಪ್ರಸಾರ ಮಾಡುವ ಮೊದಲು ನೈತಿಕತೆಯಿಂದ ವರ್ತಿಸದಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಆಜ್ ತಕ್ ಗೆ ನಿರ್ದೇಶನ ನೀಡಿದ್ದಾಗಿ ಎನ್‌ಬಿಎಸ್‌ಎ ತಿಳಿಸಿದೆ.

ಆದೇಶದಲ್ಲಿ, ಎನ್‌ಬಿಎಸ್‌ಎ ಆಜ್ ತಕ್ “ಟ್ವೀಟ್‌ಗಳನ್ನು ಪ್ರಸಾರ ಮಾಡಲು ಮತ್ತು ರಜಪೂತ್ ಮೇಲೆ  ಆರೋಪ ಹೊರಿಸುವ ಮೊದಲು ಅಗತ್ಯವಾದ ನೈತಿಕ ವರ್ತನೆ ತೋರಿಲ್ಲ ” ಎಂದು ಹೇಳಲಾಗಿದೆ.. ವೆಬ್‌ಸೈಟ್‌ನಲ್ಲಿ ಅಥವಾ ಯೂಟ್ಯೂಬ್‌ನಲ್ಲಿ ಹೋಸ್ಟ್ ಮಾಡಲಾದ ಅದೇ ಕಾರ್ಯಕ್ರಮಗಳ ವೀಡಿಯೊಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಅದು ಹೇಳಿದೆ.

ಕ್ಷಮೆಯಾಚನೆಯ ಪಠ್ಯ, ದಿನಾಂಕ ಮತ್ತು ಸಮಯವನ್ನು ಪ್ರಾಧಿಕಾರವು ಚಾನಲ್‌ಗೆ ನೀಡುತ್ತದೆ ಮತ್ತು ಆಜ್ ತಕ್ ತನ್ನ ಪ್ರಸಾರದ ಪುರಾವೆಗಳನ್ನು ಸಿಡಿಯಲ್ಲಿ ಪ್ರಸಾರ ಮಾಡಿದ ಏಳು ದಿನಗಳಲ್ಲಿ ಸಲ್ಲಿಸಬೇಕಾಗುತ್ತದೆ.ಇನ್ನು ನಟನ ಶವವನ್ನು ತೋರಿಸಿದ್ದಕ್ಕಾಗಿ ನ್ಯೂಸ್ ನೇಷನ್‌ಗೆ ಎಚ್ಚರಿಕೆ ನೀಡಿದೆ.  ಆದರೆ ಚಾನಲ್ ಇದಕ್ಕಾಗಿ ಕ್ಷಮೆ ಯಾಚಿಸಿದ ನಂತರ ಅದರ ವಿರುದ್ಧ ಕ್ರಮ ಜ್ರುಗಿಸುವುದನ್ನು ನಿಲ್ಲಿಸಿದೆ.

Leave a Reply

Your email address will not be published. Required fields are marked *

error: Content is protected !!