ಲೀಲಾಧರ್ ಶೆಟ್ಟಿ ನಿಧನ -ಎನ್ಆರ್ಐ ಕಾಂಗ್ರೆಸ್ ಅಧ್ಯಕ್ಷ ಶೇಖ್ ವಹಿದ್ ದಾವೂದ್ ಸಂತಾಪ
ಕಾಪು: ಸಮಾಜ ರತ್ನ, ಕೊಡುಗೈದಾನಿ, ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ಹಾಗೂ ಅವರ ಧರ್ಮಪತ್ನಿಯವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಉಡುಪಿ ಜಿಲ್ಲಾ ಎನ್ಆರ್ಐ ಕಾಂಗ್ರೆಸ್ ಅಧ್ಯಕ್ಷರಾದ ಶೇಖ್ ವಹಿದ್ ದಾವೂದ್ ತಿಳಿಸಿದ್ದಾರೆ.
ತನ್ನ ಊರು, ತನ್ನ ಸುತ್ತಮುತ್ತಲಿನ ಜನರ ಬಗ್ಗೆ ಸದಾ ಕಾಳಜಿ ಹೊಂದಿರುವ ಲೀಲಾಧರ್ ಅವರ ಅಗಲಿಕೆ ಅನಿವಾಸಿ ಭಾರತೀಯರು ಸಹಿತ ಸಾವಿರಾರು ಅಭಿಮಾನಿಗಳು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಯ ಕಂಪನ್ನು ಹೊರ ದೇಶದ ಸಾವಿರಾರು ತುಳುವರಿಗೆ ನೀಡಿದ ಇವರು ಅನೇಕ ತುಳು ನಾಟಕಗಳನ್ನು ಅಲ್ಲಿ ಪ್ರದರ್ಶಿಸಿ ತುಳು ಭಾಷೆಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರಲ್ಲಿ ಮೂಂಚೂಣಿಯಲ್ಲಿದ್ದರು.
ಯಾವುದೇ ಜಾತಿ ಧರ್ಮ ನೋಡದೆ ಸಮಾಜ ಮುಖಿ ಚಿಂತನೆಯ ಮೂಲಕ ಸಾಮಾಜಿಕ, ಧಾರ್ಮಿಕ, ರಂಗಭೂಮಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದ ಅಜಾತಶತ್ರು ವ್ಯಕ್ತಿತ್ವದ ಲೀಲಾಧಾರ ಶೆಟ್ಟಿ ಹಾಗೂ ಅವರ ಧರ್ಮ ಪತ್ನಿಯವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ ಎಂದು ದಾವೂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.