ಉಡುಪಿ: ಜಯಲಕ್ಷ್ಮೀ ಗೂಡ್ಸ್ ಮಾಲಕ ದಾಮೋದರ ಭಟ್ ನಿಧನ
ಉಡುಪಿ: ನಗರದ ಜಯಲಕ್ಷ್ಮೀ ಗೂಡ್ಸ್ ಮಾಲಕರಾದ ದಾಮೋದರ ಭಟ್ (54) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಇವರು ಶಾಲೆಗೆ ಸುವರ್ಣೋತ್ಸವ ಸಂದರ್ಭದಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದರು. ಸರಳ ಸಜ್ಜನಿಕೆಯ, ಶಾಂತ ಸ್ವಭಾವದ ಇವರ ನಿಧನಕ್ಕೆ ನಿಟ್ಟೂರು ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಕೆ. ರಘುಪತಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಮುಖ್ಯ ಶಿಕ್ಷಕಿ ಅನುಸೂಯ,ಹಳೆ ವಿದ್ಯಾರ್ಥಿ ಸಂಘದ ಯೋಗೀಶ್ಚಂದ್ರಾಧರಮತ್ತು ಸಿ.ಎ.ಪ್ರದೀಪ್ ಜೋಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.