ತೀರ್ಥಹಳ್ಳಿ: ಎರಡು ದಿನಗಳ ‘ನಾಯಕತ್ವ’ ಕುರಿತ ತರಬೇತಿ ಶಿಬಿರ

ತೀರ್ಥಹಳ್ಳಿ: ಮಲೆನಾಡು – ಕರಾವಳಿ ಜನಪರ ಒಕ್ಕೂಟದಿಂದ ತೀರ್ಥಹಳ್ಳಿ ತಾಲೂಕು ಕುಪ್ಪಳ್ಳಿಯಲ್ಲಿನ ಹೇಮಾಂಗಣದಲ್ಲಿ ಡಿ.16 ಶನಿವಾರ ಮತ್ತು ಡಿ.17ರ ಭಾನುವಾರ 2 ದಿನಗಳ ಕಾಲ ‘ನಾಯಕತ್ವ’ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಧೀರ್‌ ಕುಮಾರ್‌ಮುರೊಳ್ಳಿ ತಿಳಿಸಿದ್ದಾರೆ.

ಮಲೆನಾಡು ಕರಾವಳಿ ಜನಪರ ಒಕ್ಕೂಟ ಎಂದರೆ ಮಲೆನಾಡು ಜನರ ಬದುಕು, ಭಾವನೆ, ಶ್ರದ್ದೆ ನಂಬಿಕೆಗಳ ಗಟ್ಟಿ ಧ್ವನಿಯಾಗಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗಗಳು ಒಕ್ಕೂಟದ ವ್ಯಾಪ್ತಿಯಲ್ಲಿ ಬರುತ್ತವೆ. ಇದೊಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾಗಿದ್ದು ಪ್ರಜಾಪ್ರಭುತ್ವ, ಸಂವಿಧಾನಿಕ ಸಂಘಟನೆಯಲ್ಲಿ ಅಚಲ ನಂಬಿಕೆಯುಳ್ಳ ಒಕ್ಕೂಟ.

2 ದಿನಗಳ ನಾಯಕತ್ವ ತರಬೇತಿ ಶಿಬಿರ ಉಪಯುಕ್ತ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿಗೆ 8277066108, 9448245172, 9448241148 ಸಂಪರ್ಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!