ಉಡುಪಿ: ಮನೆ ಹೊರಗಡೆ ನಿಲ್ಲಿಸಿದ್ದ ಸ್ವಿಫ್ಟ್ ಕಾರು ಕಳವು
ಉಡುಪಿ, ಡಿ.11: ಮನೆಯ ಹೊರಗಡೆ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿರುವ ಘಟನೆ ಡಿ.9ರಂದು ರಾತ್ರಿ ವೇಳೆ ಅಂಬಲಪಾಡಿ ಗ್ರಾಮದ ಕಾಳಿಕಾಂಬ ನಗರ ಎಂಬಲ್ಲಿ ನಡೆದಿದೆ.
ಶಾರದಾ ಎಂಬವರು ಮನೆಗೆ ಬೀಗ ಹಾಕಿ ಗಂಡನೊಂದಿಗೆ ಬೆಂಗಳೂರಿಗೆ ಹೋಗಿದ್ದು, ವಿಚಾರ ತಿಳಿದು ಡಿ.11ರಂದು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಮಧ್ಯೆ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾರಿನ ಕೀಯನ್ನು ತೆಗೆದು ಮನೆಯ ಹೊರಗಿದ್ದ ಕೆಎ20 ಎಂಇ 0780 ನಂಬರಿನ ಮಾರುತಿ ಸ್ವಿಫ್ಟ್ ಕಾರನ್ನು ಹಾಗೂ ಆರ್ಸಿ, ಡಿಎಲ್, ಇನ್ಶುರೆನ್ಸ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಕಳವಾದ ಕಾರಿನ ಮೌಲ್ಯ 7ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.